-->
Bookmark

Gajendragad : ಸಚಿವ ಸಂಪುಟ ವಿಸ್ತರಣೆ ವಿಚಾರ: ಈಗಲಾದರೂ ಸಿಗುವುದೇ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ...?


Gajendragad : ಸಚಿವ ಸಂಪುಟ ವಿಸ್ತರಣೆ ವಿಚಾರ: ಈಗಲಾದರೂ ಸಿಗುವುದೇ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ...? 

40 ವರ್ಷ ಹಿಗೆಯೇ ಬಂದಿದ್ದೇನೆ! ರೋಣ ಶಾಸಕ ಜಿ.ಎಸ್.ಪಾಟೀಲ!

ಗಜೇಂದ್ರಗಡ : (Jan_13_2024)
ಸಚಿವ ಸಂಪುಟ ವಿಸ್ತರಣೆ ವಿಷಯ ಬಂದಾಗ ಗದಗ ಜಿಲ್ಲೆಗೆ ಸಿಗುವ ಸಚಿವ ಸ್ಥಾನ ಎಷ್ಟು ಎಂಬ ಚರ್ಚೆ ಎಲ್ಲ‌ ಸರ್ಕಾರಗಳ ಅವಧಿಯಲ್ಲಿ ಆಗಿದೆ.‌ ಬಿಜೆಪಿ ಆಡಳಿತದಲ್ಲಿ ಗದಗ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗತ್ತವೆ. ಅದರಲ್ಲಿ ರೋಣ ತಾಲೂಕಿನ ಬಿಜೆಪಿ ಪಕ್ಷ ಪ್ರತಿನಿಧಿಸುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರು. 

ಕಾಂಗ್ರೆಸ್ ಶಾಸಕ, ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಿರಿಯ ಮುಖಂಡ ಜಿ.ಎಸ್ ಪಾಟೀಲ್ ಅವರು ಬಂದು ಸುಮಾರು 40 ವರ್ಷಗಳಾಗಿವೆ.‌ ಗದಗ ಜಿಲ್ಲೆಗೆ ಹೆಚ್.ಕೆ ಪಾಟೀಲ್ ಅವರನ್ನ ಬಿಟ್ಟರೇ, ಬೇರೆಯವರಿಗೆ ಸಚಿವ ಸ್ಥಾನ ಸಿಗುವುದಿಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆ ಬಂದಾಗ ಸಣ್ಣ ಜಿಲ್ಲೆ ಎಂಬ ಸಬೂಬು ನೀಡುತ್ತಾರೆ. ಆದ್ರೆ, ಜಿಎಸ್ ಪಾಟೀಲ್ ಅವರೂ ಸಹ ಹಿರಿಯರು, ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನ ಮೂಡಿದ್ದಾರೆ. ಸರಳ, ಸಜ್ಜನ ವ್ಯಕ್ತಿ, ಯಾವತ್ತು ಕೈ ಹೈ ಕಮಾಂಡ್ ಹೇಳಿದಂತೆ ನಡೆದ ನಾಯಕ ಎಂಬುದು ಜಗಜ್ಜಾಹಿರವೇ ಸರಿ. ಆದ್ರೂ, ಹಿರಿಯರಾದವರಿಗೆ ಈ ಸಲ ನಡೆಯುವ ಸಚಿವ ಸಂಪುಟದ ಪುನಾರಚನೆ ವೇಳೆ, ಸಚಿವ ಸ್ಥಾನ ಸಿಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ರೋಣ ಕ್ಷೇತ್ರಕ್ಕೆ ಕೊಡುವ ಆದ್ಯತೆಯನ್ನ ಕಾಂಗ್ರೆಸ್ ಯಾಕೆ ಕೊಡುತ್ತಿಲ್ಲ ಎಂಬ ಪ್ರಶ್ನೆಯೂ ಆಗಾಗ ಕೇಳಿ ಬರುತ್ತದೆ. 

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿರಿಯ ನಾಯಕರಿಗೆ ಈ ಸಲ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದರೇ, ಕ್ಷೇತ್ರದ ಜನರಿಗೆ ಅನ್ಯಾಯವಾದಂತಾಗುತ್ತದೆ. ಈಗಲಾದರೂ, ಕಾಂಗ್ರೆಸ್ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡೋಣ ಎನ್ನುವ ಮಾತನ್ನ ಜಿ.ಎಸ್. ಪಾಟೀಲ್ ಅವರು ಹೇಳಿದ್ದಾರೆ. ಇದು ಅವರೊಬ್ಬ ಜವಾಬ್ದಾಯುತ ಸ್ಥಾನದಲ್ಲಿದ್ದು, ಮಾತನಾಡುವ ವ್ಯಕ್ತಿತ್ವಕ್ಕೆ ನಿದರ್ಶನ.
Post a Comment

Post a Comment