ಜನರ ನಾಡಿ ಮಿಡಿತ ಅರಿತ "ಗದಗವಾಣಿ"
ಗಜೇಂದ್ರಗಡ : (Jan_14_2025)
ಉತ್ತರ ಕರ್ನಾಟಕದ ಜನಧ್ವನಿಯಾಗಿ ಕಡಿಮೆ ಸಮಯದಲ್ಲೇ ಲಕ್ಷಾಂತರ ಓದುಗರ ಮನಗೆದ್ದು ಬೆಳೆದು ನಿಂತಿರುವ "ಗದಗವಾಣಿ" ಪ್ರಾದೇಶಿಕ ದಿನಪತ್ರಿಕೆ ಮತ್ತು ಕೇಬಲ್ ಟಿವಿ ವಾಹಿನಿ ಕಳೆದ ಮೂರು ವರ್ಷಗಳಿಂದ ಕರುನಾಡಿನ ಜನಧ್ವನಿಯಾಗಿದೆ. ಗದಗವಾಣಿ ದಿನಪತ್ರಿಕೆಗೆ ಸಹಸ್ರಾರು ಓದುಗರು, ಜಾಹಿರಾತುದಾರರು ಸಹಕಾರ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಅವರಿಲ್ಲರಿಗೂ ಮೊದಲು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಹಾಗೂ ನಿಮಗೂ ನಿಮ್ಮ ಮನೆ ಮಂದಿಗೂ ಸಮಸ್ತ ನಾಡಿನ ಜನತೆಗೆ ಕನ್ನಡಿಗರಿಗೆ, ಕನ್ನಡ ಪತ್ರಿಕೆಯ ಅಭಿಮಾನಿಗಳಿಗೆ ಪ್ಲವನಾಮ ಸಂವತ್ಸರದ ದೀಪಾವಳಿ ಹಾಗೂ ೨೦೨೫ರ ಹೊಸವರ್ಷದ ಹೃದಯ ಪೂರ್ವಕ ಶುಭಾಶಯಗಳು.
ಗದಗವಾಣಿ ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಮತ್ತು ಟಿವಿಚಾನಲ್ ಎನಿಸಿದೆ. ೨೦೨೧ ರ ನವೆಂಬರ್ ತಿಂಗಳಲ್ಲಿ ಆರಂಭಗೊAಡ "ಗದಗವಾಣಿ' ದಿನಪತ್ರಿಕೆ ಮತ್ತು ಟಿವಿಚಾನಲ್ ಇದೊಂದು ವೃತ್ತಿ ನಿರತ ಪತ್ರಕರ್ತರು ಸೇರಿ ಕಟ್ಟಿ, ನಡೆಸುತ್ತಿರುವ "ಸುದ್ದಿ ಸೌರಭ"ದ ಕಣಜವಾಗಿ ಹೊರಹೊಮ್ಮಿದೆ. ಪತ್ರಿಕೆಯ ಪ್ರತಿ ಹೆಜ್ಜೆ ಹೆಜ್ಜೆಗೂ ಸಹಕಾರ ನೀಡಿದ ಸ್ನೇಹ ಬಳಗ, ಪತ್ರಿಕಾ ಮಿತ್ರರೂ ನನ್ನ ಮೊದಲ ಹಿತೈಷಿಗಳಾಗಿ ಸಹಕಾರ ನೀಡಿದ್ದನ್ನು ನಾನು ಎಂದು ಮರೆಯುವಂತಿಲ್ಲ.
ಪ್ರಾದೇಶಿಕ ಸುದ್ದಿಗಳಿಗೆ ಮೊದಲ ಪ್ರಾಶಸ್ಯ ನೀಡಿ ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲಾ ಆಗು-ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಮತ್ತು ಟಿವಿಚಾನಲ್ ಆಗಿ ಹೊರಹೊಮ್ಮಿದೆ "ಗದಗವಾಣಿ" ಹಿಂದೂ-ಮುಸ್ಲಿA ಭಾವೈಕ್ಯ ತಾಣ, ಕೋಟೆನಾಡು "ಗಜೇಂದ್ರಗಡ" ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ "ಗದಗವಾಣಿ" ಪ್ರಾದೇಶಿಕ ದಿನಪತ್ರಿಕೆ ಅಲ್ಲಿಂದಲೇ "ಎಸ್ಎನ್" ಕೇಬಲ್ ನೆಟ್ವರ್ಕನ ಚಾನಲ್ ನಂ.೭ ರಲ್ಲಿ ಕೇಬಲ್ ಟಿವಿ ಮೂಲಕ ಎಲ್ಲರ ಮನೆ-ಮನ ತಲುಪಿದೆ, ಅಲ್ಲದೆ, ಗದಗ-ಕೊಪ್ಪಳ-ಬಾಗಲಕೋಟ-ವಿಜಯಪೂರ ಜಿಲ್ಲೆಗಳಲ್ಲಿ ಸ್ಥಾನಿಕ ಕಚೇರಿಯ ಮೂಲಕ ಪ್ರಾದೇಶಿಕ ಪತ್ರಿಕೆಯಾಗಿ ಉತ್ತರ ಕರ್ನಾಟಕದ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ.
ಸ್ವಾತAತ್ರö್ಯ ಹೋರಾಟ ಸಂದರ್ಭದಲ್ಲಿ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಬಹುಮುಖ್ಯ. ಕಳೆದ ಆರೇಳು ದಶಕಗಳ ಹಾದಿಯಲ್ಲಿ ಪತ್ರಿಕಾ ರಂಗ ಹಲವು ಮಜಲುಗಳನ್ನು ಕಂಡಿದೆ. ಮಾಧ್ಯಮವನ್ನು ಪತ್ರಿಕಾ ರಂಗ ಎಂದು ಕರೆಯುತ್ತಿದ್ದರು. ಈ ಕ್ಷೇತ್ರವೂ ಸಹ ಕಲಾತ್ಮಕ ಎನಿಸಿತ್ತು. ಆದರೆ, ಪತ್ರಿಕಾ ರಂಗ ಕಾಲಕ್ರಮೇಣ ಉದ್ಯಮದ ಸ್ವರೂಪ ಪಡೆಯಿತು. ಆದ್ದರಿಂದಲೇ ಪತ್ರಿಕಾ ರಂಗ ಪತ್ರಿಕೋದ್ಯಮವಾಗಿ ಮಗ್ಗಲು ಬದಲಿಸಿದೆ. ಆಧುನಿಕ ಜಗತ್ತಿನಲ್ಲಿ ಮಾಧ್ಯಮ ಬಹು ಪರಿಣಾಮಕಾರಿ ಕ್ಷೇತ್ರ ಎನಿಸಿದೆ. ತಂತ್ರಜ್ಞಾನ ಬೆಳವಣಿಗೆಯಾದಂತೆ ಮುದ್ರಣ ಮಾಧ್ಯಮ, ಶ್ರವ್ಯ ಮಾಧ್ಯಮ, ದೃಶ್ಯ ಮಾಧ್ಯಮ ಹೀಗೆ ಹಲವು ಸ್ವರೂಪಗಳಲ್ಲಿ ಮಾಧ್ಯಮ ಬೆಳೆದು ಬಂದಿದೆ. ಅದರಲ್ಲೂ ೨೧ನೇ ಶತಮಾನದಲ್ಲಿ ಸಾಮಾಜಿಕ ಜಾಲತಾಣವೂ ಸಹ ಪ್ರಭಾವಿ ಮತ್ತು ಪರಿಣಾಮಕಾರಿ ಮಾಧ್ಯಮವಾಗಿ ಹೊರ ಹೊಮ್ಮಿದೆ. ದೃಶ್ಯ ಮಾಧ್ಯಮ ಬಂದ ಮೇಲೆ ಮುದ್ರಣ ಮಾಧ್ಯಮದ ಕಾಲ ಮುಗಿಯಿತು ಎಂದು ಮಾತನಾಡಿದ್ದೂ ಉಂಟು. ಆದರೆ, ಈ ಆತಂಕ ಸುಳ್ಳಾಗಿದೆ. ದಿನವಿಡೀ ಟಿವಿ ಮುಂದೆ ಕ್ರಿಕೆಟ್ ನೋಡಿದರೂ ಸಹ ಮರು ದಿನ ಬೆಳಗ್ಗೆ ಪತ್ರಿಕೆಗಳಲ್ಲಿ ಪಂದ್ಯದ ಫಲಿತಾಂಶ ಹಾಗೂ ಇನ್ನಿತರ ಅಂಶಗಳ ಮೇಲೆ ಕಣ್ಣಾಡಿಸುವುದು ತಪ್ಪಿಲ್ಲ. ಆದ್ದರಿಂದ ಮುದ್ರಣ ಮಾಧ್ಯಮ ಅಜರಾಮರ.
ಮುದ್ರಣ ಮಾಧ್ಯಮದಲ್ಲೇ ಹಲವು ಭಾಷೆಗಳಲ್ಲಿ ಪತ್ರಿಕೆಗಳು ಹೊರ ಬರುತ್ತಿವೆ. ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಲಕ್ಷಾಂತರ ಪ್ರಸಾರ ಸಂಖ್ಯೆಯುಳ್ಳ ಪತ್ರಿಕೆಗಳಿವೆ. ರಾಜ್ಯಮಟ್ಟದ ಪತ್ರಿಕೆಗಳೂ ಸಹ ಆವೃತ್ತಿ ಹೆಚ್ಚಿಸುತ್ತಿವೆ. ಪ್ರತಿ ಜಿಲ್ಲೆಗೆ ೪ ಪುಟಗಳ ಸುದ್ದಿಗಳನ್ನು ಕೊಡುತ್ತಿವೆ. ಪ್ರಸ್ತುತ ಸ್ಥಳೀಯ ಪತ್ರಿಕೆಗಳು ಸಂಕಷ್ಟದ ಕಾಲಘಟ್ಟದಲ್ಲಿವೆ. ರಾಜ್ಯಮಟ್ಟದ ಪತ್ರಿಕೆಗಳ ಜೊತೆ ಪೈಪೋಟ ನಡೆಸಿ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಅನಾರೋಗ್ಯಕರ ಪೈಪೋಟಿಯನ್ನೂ ಎದುರಿಸಲೇಬೇಕಿದೆ. ಜಿಲ್ಲಾಮಟ್ಟದ ಪತ್ರಿಕೆ ನಡೆಸುವುದು ಬೆಟ್ಟ ಹೊತ್ತು ನಿಂತAತೆ' ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದ ಮಾತು ಅಕ್ಷರಶಃ ಸತ್ಯ. ಗಜಪ್ರಸವಕ್ಕೆ ಹೋಲಿಸಿದರೂ ಅತಿಶಯೋಕ್ತಿಯಲ್ಲ.
ಮಹತ್ವದ ವಿಚಾರಗಳಲ್ಲಿ ನಿರ್ಭಿತಿಯಿಂದ ಜನರ ಆಶಯಗಳನ್ನು ಬಿಂಬಿಸುವ " ಗದಗವಾಣಿ" ತನ್ನ ನೇರ, ನಿಷ್ಟುರ ವಿಶೇಷ ವರದಿಗಳಿಂದಲೂ ಹೆಸರುವಾಸಿ, ಸುದ್ದಿಯ ಪ್ರಸಾರದೊಂದಿಗೆ ವಿಶೇಷ ದಿನಗಳಲ್ಲಿ "ಪ್ಲಾಗ್ ವಿಥ್ ಸೆಲ್ಪಿ", 'ನವರಾತ್ರಿ ವೈಭವ', 'ಸೆಲ್ಸಿ ವಿಥ್ ಗಣಪ", "ಬಾಲ ಮುದ್ದು ಕೃಷ್ಣ" ದಂತಹ ವಿಭಿನ್ನ ಯೋಜನೆಯನ್ನು ರೂಪಿಸಿ ಓದುಗರಿಗೆ ಪತ್ರಿಕೆಯಲ್ಲಿ ವಿಶೇಷ ಪುಟ ನೀಡಿತ್ತು. ಅಲ್ಲದೆ, ಕವಿ ಮತ್ತು ಯುವ ಲೇಖಕರಿಗೆ ಗದಗವಾಣಿ ಪ್ರಾದೇಶಿಕ ದಿನಪತ್ರಿಕೆ ಉತ್ತಮ ವೇದಿಕೆ ಕಲ್ಪಿಸಿದಂತು ಸುಳ್ಳಲ್ಲ.
ಪತ್ರಿಕೆಯಲ್ಲಿ ಪ್ರಮುಖ ವರ್ತಮಾನ ಜತೆಗಿನ "ಆನ್ ಲೈನ್" ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್ ಫಾರ್ಮ್ಗೆ ಕರೆದೊಯ್ಯುತ್ತವೆ. ಎನ್ನುವ ಕಾರಣಕ್ಕೆ ಗದಗವಾಣಿ ವೆಬ್ (ಗದಗವಾಣಿ.ಕಾಂ), ಗದಗವಾಣಿ ಇ-ಪೇಪರ್ (ಇಪೇಪರ್ ಗದಗವಾಣಿ.ಕಾಂ), ಯುಟ್ಯೂಬ್ (ಗದಗವಾಣಿ ಟಿವಿಚಾನಲ್ ) ತೆರೆದು ಸುದ್ದಿಯ ರಸದೌತಣ ನೀಡುತ್ತಿದೆ. ಯುಟ್ಯೂಬ್ ಮತ್ತು ವಬ್ ಸೈಟ್ ಉತ್ತಮ ಗುಣಮಟ್ಟದ ವಿಡಿಯೋಗಳು ಮತ್ತು ಪಾಡ್ಕಾಸ್ಟ್ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ.
ವಿಜಯವಾಣಿಯಿಂದ ಹೊರ ಬಂದು ಸ್ಥಳೀಯ ಪತ್ರಿಕೆ ಮಾಡುತ್ತಿದ್ದೇನೆ ಎಂದಾಗ ಕೆಲವರು ಗಹಗಹಿಸಿ ನಕ್ಕರು. ಇನ್ನೂ ಕೆಲವರು "ತುಂಬಾ ಹಣ ಬೇಕು ಯೋಚಿಸು" ಎಂದು ಸಲಹೆಯನ್ನೂ ಕೊಟ್ಟರು. ತಕ್ಷಣ ನನಗೆ ಹೊಳೆದದ್ದು, ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಉಪಸಂಪಾದಕರಾದ ತಿಪ್ಪಣ್ಣ ಅವಧೂತ, ಅವರು ಸಲಹೆ ನೀಡಿದ್ದು, ಮೊದಲು ಮನೆಗೆಲ್ಲು ಎಂದು ಅಂದರೆ ಸ್ಥಳೀಯ ಹೆಸರಿನಿಂದ ಪತ್ರಿಕೆ ಹೊರತಂದು ಬಳಿಕ ಬೇರೆ ಬೇರೆ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಹಂತ ಹಂತವಾಗಿ ಮಾಡು ಎಂದು ಹಾಗಯೇ 'ಒಂದು ಪತ್ರಿಕೆ ಮಾಡಲು ಸುದ್ದಿಯಷ್ಟೇ ವರಮಾನವೂ ಮುಖ್ಯ. ನಿಮಗೆ ಎರಡನ್ನೂ ಹೊಂದಿಸುವ ಸಾಮರ್ಥ್ಯವಿದೆ. ಆರಂಭದಲ್ಲಿ ಕಷ್ಟವಾಗುತ್ತದೆ. ಹೆದರಬೇಡಿ. ಆರಂಭಿಸಿ' ಎಂದು ಬೆನ್ನು ತಟ್ಟಿದರು.
ಅಲ್ಲಿಂದ ಬಂದು ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ರಾಜ್ಯಾಧ್ಯಕ್ಷರಾದ ಅವಿನಾಶ ಸಾಲಿಮನಿ ಅವರನ್ನು ಭೇಟಿಯಾದೆ. "ಪತ್ರಿಕೆ ಆರಂಭಿಸುವುದು ಸುಲಭ, ನಡೆಸುವುದು ಕಷ್ಟ. ಆದರೆ, ಅಸಾಧ್ಯವೇನಲ್ಲ. ಹಗಲಿರುಳು ದುಡಿಯಬೇಕು. ನಿಮ್ಮಲ್ಲಿ ಆ ಸಾಮರ್ಥ್ಯವಿದೆ. ಮುನ್ನುಗ್ಗಿ" ಎಂದು ಹುರಿದುಂಬಿಸಿದರು. ನಿವೃತ್ತ ವಾರ್ತಾಧಿಕಾರಿ ದಿ. ಬಸವರಾಜ ಆಕವಾಡಿ ಹಾಗೂ ಹಿರಿಯ ಪತ್ರಕರ್ತ ಹಾಗೂ ಗುರುಗಳಾದ ಬಸವರಾಜ ಪಟ್ಟಣಶೆಟ್ಟಿ ಅವರು ಪತ್ರಿಕೆಗೆ ಜಾಹಿರಾತುಗಳೇ ಜಿವಾಳ ವಿಶೇಷಾಂಕ ಸಹಿತ ವಿಶೇಷ ಪುರವಣಿ ತೆರೆದು ಮುನ್ನುಗ್ಗು ಎಂದು ಪ್ರೋತ್ಸಾಹಿಸಿದರು. ಈ ವೇಳೆ ಆತ್ಮೀಯ ಗೆಳೆಯ ಸೀತಲ್ ಓಲೇಕಾರ "ನಿಮಗೆ ನಮ್ಮ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ದುಡಿಯುವ ಸಾಮರ್ಥ್ಯವೂ ನಿಮ್ಮಲ್ಲಿದೆ. ಜನ ಕೈ ಹಿಡಿಯುತ್ತಾರೆ. ಪತ್ರಿಕೆ ಮಾಡಿ. ನಾವು ನಿಮ್ಮೊಂದಿಗೆ ಕೈಜೋಡಿಸುತ್ತೇ ಎಂದು ದಾವಲಸಾಬ ತಾಳಿಕೋಟಿ ಅವರೊಂದಿಗೆ ಬಂದು ಎಂದು ಸಲಹೆ ನೀಡಿದರು. ಅಲ್ಲದೇ, ದೃಶ್ಯ ಮಾಧ್ಯಮದಲ್ಲಿ ನನಗೆ ಅನುಭವಿದೆ. ಅದರ ಸಂಪೂರ್ಣ ಜವಾಬ್ದಾರಿ ಹೊತ್ತು ಸಾಗುವೆ ಎಂದು ಆತ್ಮಸ್ಥೆöÊರ್ಯದ ಮಾತನ್ನಾಡಿದರು. ಅಳಿಯ ಪತ್ರಿಕೆಯ ಕೆಲಸದ ನಿಮಿತ್ಯ ಜಗನ್ನಾಥ ಚವ್ಹಾಣ ಹುಬ್ಬಳ್ಳಿ-ಗದಗ ಹೋಗಬೇಕಾದರೆ ಜೊತೆಯಲ್ಲೇ ಇದ್ದು, ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಉತ್ತುಂಗಕ್ಕೆ ಕೊಂಡ್ಯೂಯುವಲ್ಲಿ ಕಾರಣಿಭೂತರಾದವರು. ಸಹೋದರನಂತಿರುವ ವೀರಣ್ಣ ಸಂಗಳದ, ಮಂಜುನಾಥ ಕುದರಿಕೋಟಿ, ರವಿ ನಿಡಗುಂದಿ, ಪರಶುರಾಮ ಮಾದರ ಸಹಾಯ ನೆನೆಯದೇ ಇರಲಾರೆ. ಹೆಗಲಿಗೆ ಹೆಗಲು ಕೊಟ್ಟು ದುಡಿದು ಪತ್ರಿಕೆ ಮತ್ತು ಟಿವಿಚಾನಲ್ ೩ ವರ್ಷ ಪೂರೈಸಲು ಇವರ ಶ್ರಮ ಬಹುಮುಖ್ಯ. ಹಾಗೆಯೇ ಹಿರಿಯರಾದ ಮುತ್ತಣ್ಣ ಭರಡಿ, ಅಲ್ಲಾಭಕ್ಷಿ ನಧಾಫ, ಸದ್ದಾಂಹುಸೇನ ಜಿಗಳೂರ, ಕೆ.ಎಂ.ಶರಣಯ್ಯಸ್ವಾಮಿ, ಉದಯ ತೋಟದ, ಬಹುಮುಖ ಪ್ರತಿಭೆ ಕಿರಣ ನಿಡಗುಂದಿ, ಮುಸ್ತಾಕ್ ಹುಟಗೂರ, ಡಾ.ಕಿರಣಕುಮಾರ ರಾಯರ, ಮುರ್ತುಜಾ ಬದಾಮಿ, ಲಿಂಗರಾಜ ಗಾಳಿ ಇಲ್ಲಿ ನೆನೆಯುವೆ.
ಸುದ್ದಿ ಪ್ರಸಾರದೊಂದಿಗೆ ಗದಗವಾಣಿ ತಂಡ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗಕ್ಕೂ ಒತ್ತು ನೀಡಿದ್ದು, ತಾಲೂಕ ಮಟ್ಟದ ಕ್ರೀಡಾಕೂಟ, ಹುತಾತ್ಮರ ದಿನಾಚರಣೆ, "ಗದಗವಾಣಿ-ಗಾನಕೋಗಿಲೆ" ಸೀಸನ್೧, ೨, ೩ ಮತ್ತು ಸೀಸನ್-೪ ಕಾರ್ಯಕ್ರಮ ಏರ್ಪಡಿಸುವ ಮೂಲಕ ಯುವ ಗಾಯಕರಿಗೆ, ಕ್ರೀಡಾಪಟುಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಅಲ್ಲದೆ, ಎಲೆ-ಮರೆಯ ಕಾಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರತಿವರ್ಷ ವಾರ್ಷಿಕೋತ್ಸವದ ಸಂದರ್ಭದಲ್ಲಿ "ಕರುನಾಡು ಕಾಯಕ ಸಮ್ಮಾನ್" ಎಂಬ ಶಿರೋನಾಮೆಯಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮೂರನೇ ವಾರ್ಷಿಕೋತ್ಸವ ಗದಗ ಜಿಲ್ಲೆ ಗಜೇಂದ್ರಗಡದ ಶ್ರೀ ಹಿರೇದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ೨೦೨೫ರ ಜನೇವರಿ ೧೮ ರಂದು ಕ್ರಾಂತಿಸೂರ್ಯ ಜೈಭೀಮ್ ಸೇನೆ ಅದ್ದೂರಿ ಉದ್ಘಾಟನೆ, "ಓದುಗದೊರೆಗಳ ಸಮಾವೇಶ, ಗದಗವಾಣಿ ಗಾನಕೋಗಿಲೆ ಸೀಸನ್-೪ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ "ಕರುನಾಡ ಕಾಯಕ ಸಮ್ಮಾನ್-೨೦೨೪" ರಾಜ್ಯ ಪ್ರಶಸ್ತಿ, ಜೊತೆಗೆ ಮಾಧ್ಯಮ ರತ್ನ, ಸೇವಾ ರತ್ನ, ಕರುನಾಡ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಗುಣಕ್ಕೆ ಮತ್ಸರ ಇರಬಾರದು. ಕಷ್ಟ ಕಾಲದಲ್ಲಿ ನೆರವಾದ ವ್ಯಕ್ತಿಯನ್ನು ಸ್ಮರಿಸಬೇಕು. 'ಉಪಕಾರ ಸ್ಮರಣೆ ಮನುಷ್ಯನ ಗುಣಧರ್ಮ' ಎಂದು ನಂಬಿದ ವ್ಯಕ್ತಿ ನಾನು. ಆದ್ದರಿಂದ ನನ್ನ ಮನದಲ್ಲಿ ಹುದುಗಿದ್ದ ಭಾವನೆಗಳನ್ನು ನಿಮ್ಮ ಜೊತೆ ಹಂಚಿಕೊAಡಿದ್ದೇನೆ. ಪತ್ರಿಕೆ ಮೂರನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿದೆ. ನಿಮ್ಮ ಸಲಹೆ, ಸಹಕಾರ ಹೀಗೆ ಇರಲಿ,
- ಮಂಜುನಾಥ ಎಸ್. ರಾಠೋಡ
ಪ್ರಧಾನ ಸಂಪಾದಕರು,
ಗದಗವಾಣಿ ಸಮೂಹ ಮಾಧ್ಯಮ ಸಂಸ್ಥೆ
Post a Comment