ಗಜೇಂದ್ರಗಡ : (Jan_08_2025)
ಗದಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮ್ಮೇಳನ ಹಮ್ಮಿಕೊಂಡಿದೆ. ಒಳ್ಳೆ ವಿಷಯ ಆದ್ರೆ, ವಿವೇಕಾನಂದಗೌಡ ಅವರು ಕಸಾಪ ಜಿಲ್ಲಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಜಿಲ್ಲಾ ಸಮ್ಮೇಳನ ಇದಾಗಿದೆ. ಸಾಹಿತ್ಯ ಕ್ಷೇತ್ರ ಎಂಬುದು ಏಕಮುಖವಾಗಿ ಚಲಿಸದು. ಒಬ್ಬರಿಂದ ನಡೆಯುವುದಿಲ್ಲ. ಆಜೀವ ಸದಸ್ಯರನ್ನ ವಿಶ್ವಾಸಕ್ಕೆ ಪಡೆಯದ ಇವರು, ಈಗ ಜಿಲ್ಲಾ ಸಮ್ಮೇಳನ ಮಾಡುತ್ತಿದ್ದಾರೆ. ಇನ್ನೂ, ತಾಲೂಕಾಧ್ಯಕ್ಷರಿಗೆ ಮೂರು ಮತ್ತೊಂದು ಅವರಿಗೆ ನಾಲ್ಕು ಜನ ಜೊತೆಗಿದ್ದರೆ ಸಾಕು. ಅದುವೇ ಸಾಹಿತ್ಯ ಕ್ಷೇತ್ರ ಎಂದರಿತುಕೊಂಡಿದ್ದಾರೆ ಎಂದು ಅವರ ಹಾವ ಭಾವದಿಂದ ತಿಳಿಯುತ್ತದೆ. ಹೀಗೆ ಮುಂದುವರಿದಿದ್ದರಿಂದಲೇ, ಜಿಲ್ಲಾ ಸಮ್ಮೇಳನದ ಪೂರ್ವ ಭಾವಿ ಸಭೆಯಲ್ಲಿ ಸಾಹಿತ್ಯಾಸಕ್ತರು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು. ಕೆಲ ಸಂಘಟನೆಗಳು ಭಾಗ ವಹಿಸಲೇ ಇಲ್ಲ. ಸಾರ್ವಜನಿಕರೂ ಅಷ್ಟಾಗಿ ಭಾಗವಹಿಸಲಿಲ್ಲ. ಹೀಗೆ ಮುಂದುವರಿದ್ರೆ, ಜಿಲ್ಲಾ ಸಮ್ಮೇಳನ ತಮ್ಮ ತಮ್ಮ ಇಚ್ಛೆಯಾನುಸಾರ ನಡೆಯುತ್ತಿದೆ ಎಂಬುದು ಕಣ್ಣಿಗೆ ಕಾಣುತ್ತದೆ. ಕಸಾಪ ಚುನಾವಣೆ ನಡೆದು ನಾಲ್ಕನೆ ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ಇವರಿಗೆ ಜಿಲ್ಲಾ ಸಮ್ಮೇಳನ ಮಾಡುವುದು ನೆನಪಿಗೆ ಬಂದಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆಯೂ ಆಗುತ್ತಿದೆ. ಗಜೇಂದ್ರಗಡ ಕಸಾಪ ತಾಲೂಕಾಧ್ಯಕ್ಷರಿಗೆ ಸಾಹಿತ್ಯದಲ್ಲಿ ಆಸಕ್ತಿಯೇ ಇಲ್ಲ ಎಂಬುದು ಜಗಜ್ಜಾಹಿರ. ಇನ್ಮುಂದಾದ್ರು ಸಾಹಿತ್ಯಾಸಕ್ತರನ್ನ ಆಯ್ಕೆ ಮಾಡಬೇಕಿದೆ. ಗಜೇಂದ್ರಗಡ ಸೇರಿದಂತೆ ಗದಗ ಜಿಲ್ಲೆಯಲ್ಲಿ ಕಸಾಪ ಪಂಪರು ನಿದ್ದೆಗೆ ಜಾರಿದೆ ಎಂದರೆ ತಪ್ಪಾಗಲ್ಲ. ಹೀಗೆ ಮುಂದುವರೆದ್ರೆ, ಶೀಘ್ರದಲ್ಲೇ ಕಸಾಪ ಕಣ್ಮರೆಯಾಗಲಿದೆ. ಕಣ್ಮರೆಯಾಗುವ ಪ್ರವೃತ್ತಿಗೆ ಈಗ ಚಾಲನೆ ಸಿಕ್ಕಂತಾಗಿದೆ. ಇದೆಲ್ಲವನ್ನ ನೋಡುತ್ತಿರುವ ಸಾಹಿತ್ಯಾಸಕ್ತರು, ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. ಸಾಹಿತ್ಯ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ.
Post a Comment