Gajendragad : JT ಕಾಲೇಜಿನಲ್ಲಿ ರಾಷ್ಟೀಯ ಯುವ ದಿನಾಚರಣೆ : ಆರೋಗ್ಯ ಕಾಪಾಡಿಕೊಳ್ಳಲು ಸಲಹೆ
ಗಜೇಂದ್ರಗಡ : (Jan_12_2025)
ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜು ಹಾಗೂ ವೆಂಕಟೇಶ್ವರ ಆಸ್ಪತ್ರೆ ಗಜೇಂದ್ರಗಡ ಇವರ ಸಹಯೋಗದಲ್ಲಿ ರಾಷ್ಟೀಯ ಯುವ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಉಚಿತ ಅರೋಗ್ಯ ಹಾಗೂ ರಕ್ತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಡಾ.ನಿಂಗರಡ್ಡಿ ತಿರುಕಣ್ಣವರ್ ಮಾತನಾಡಿ, ಈಗಿನ ಕಾಲಘಟ್ಟದಲ್ಲಿ ಮನುಷ್ಯ ಒತ್ತಡ ಹಾಗೂ ಆಧುನಿಕ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ನರಳುತ್ತಿದ್ದಾನೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಗುಣಪಡಿಸಬಹುದು ಎಂದರು. ಅಲ್ಲದೇ, ದುಷ್ಟಟಗಳಿಂದ ದೂರವಿದ್ದು ಕಾಯಿಲೆ ಬರುವ ಮುನ್ನವೇ ವಿದ್ಯಾರ್ಥಿಗಳು ಎಚ್ಚರ ವಹಿಸಿದರೆ ಅನಾರೋಗ್ಯದಿಂದ ಪಾರಾಗಬಹುದು ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ವೀರೇಶ್ ಸವಣೂರ್ ಮಾತನಾಡಿ, ತಂದೆ-ತಾಯಿಗಳು ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸಿರುತ್ತಾರೆ. ಅವರ ಬಗ್ಗೆ ಮುತುವರ್ಜಿ ವಹಿಸುವುದು ಮಕ್ಕಳ ಕರ್ತವ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಇದೇವೇಳೆ, ಗ್ರಾಮೀಣ ಹಾಗೂ ನಗರದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಆರೋಗ್ಯ ಜಾಗೃತಿಗೆ ನಮ್ಮ ಆಸ್ಪತ್ರೆ ಆಯೋಜಿಸಿರುವ ಆರೋಗ್ಯ ಶಿಬಿರ ಸಹಕಾರಿ ಎಂದರು.
ಕಾಲೇಜು ಪ್ರಾಚಾರ್ಯ ಸಂಗಮೇಶ್ ಬಾಗೂರ್ ಮಾತನಾಡಿ, ನಾವು ಸದೃಢವಾಗಿದ್ದರೆ ಮಾತ್ರ ಎಲ್ಲವನ್ನು ಸಾಧಿಸಬಹುದು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡು ಮುಖ್ಯ, ವ್ಯಾಯಾಮ ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅರೋಗ್ಯವನ್ನು ಕಾಪಾಡಿಕೊಂಡು ಜಂಕ್ ಫುಡ್ ಗಳಿಂದ ಆದಷ್ಟು ದೂರವಿರಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಭಿಲಾಶಾ ಗಂಜಿಹಾಳ್, ಅಶೋಕ್ ಅಂಗಡಿ, ಶೃತಿ ನಡಕಟ್ಟಿನ್, ಆನಂದ್ ಜೂಚನಿ, ಶರಣು ಅಂಗಡಿ, ಮಲ್ಲನಗೌಡ ಗೌಡರ್, ಪ್ರಶಾಂತ್ ಹಾರೊಗೇರಿ, ಸಿದ್ರಾಮೇಶ ಕರಬಾಶೆಟ್ಟರ್, ಹನಮಂತ್ ನಡಕಟ್ಟಿನ್, ಕವಿತಾ ಪಾಟೀಲ್, ಸುಶೀಲಾ ಮುಂಡರಗಿ, ಫಾತಿಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಶಿವಕುಮಾರ್ ಕೊಸಗಿ, ಪ್ರವೀಣ್ ಚಿತ್ರಗಾರ್, ಈರಣ್ಣ ಹಾಗೂ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
Post a Comment