ಅಧ್ಯಕ್ಷ ವೀರಣ್ಣ ಅವರಿಗೆ
ಡಿಡಿ ವಿತರಿಸಿದ ಪಟಗಾರ್
ಗಜೇಂದ್ರಗಡ : (Jan_26_2025)
ಪಟ್ಟಣದ ಶ್ರೀ ಜಗದ್ಗುರು ಸಿದ್ಧಾರೂಢಸ್ವಾಮಿ ಮಂದಿರ ಟ್ರಸ್ಟ ಕಮೀಟಿ ಅಧ್ಯಕ್ಷರಾದ ವೀರಣ್ಣ ಸವಣೂರ್ ಅವರಿಗೆ 1ಲಕ್ಷ 50 ಸಾವಿರ ರೂಪಾಯಿಗಳ ಡಿಡಿಯನ್ನ ವಿತರಿಸಲಾಯ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗದಗ ಜಿಲ್ಲೆಯ ರಾಜೂರು ವಲಯದ ಜವಳ ಪ್ಲಾಟ್ ಕಾರ್ಯಕ್ಷೇತ್ರದಲ್ಲಿ ಶ್ರೀ ಜಗದ್ಗುರು ಸಿದ್ದಾರೂಢ ಮಠದ ಜೀಣ್ರೋದ್ಧಾರ ಕಾರ್ಯಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಮಂಜೂರು ಮಾಡಲಾಗಿದೆ. ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ್ ಕ್ಷೇತ್ರದ ಹಿನ್ನೆಲೆ ಮತ್ತು ಯೋಜನೆಯ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಇನ್ನು ಹತ್ತಾರು ಕೆಲಸಗಳನ್ನ ಮಾಡುತ್ತಿದ್ದು, ಅದನ್ನು ಸ್ಮರಿಸಿದರು. ಈ ಚೆಕ್ ವಿತರಣೆಗೆ ಶ್ರೀಮತಿ ದೀಪಿಕಾ ಘೋರ್ಪಡೆ ಅವರು ಶ್ರಮಿಸಿದ್ದಾರೆ ಎಂದು ಪಟಗಾರ್ ತಿಳಿಸಿದರು.
ದೇವಸ್ಥಾನದ ಕಮಿಟಿ ಅಧ್ಯಕ್ಷ
ವೀರಣ್ಣ ಸವಣೂರ್, ಉಪಾಧ್ಯಕ್ಷ ಯಲ್ಲಪ್ಪ ಸವಣೂರ್, ಕಾರ್ಯದರ್ಶಿ ಬಸವರಾಜ್ ಶಿವಲಿಂಗಪ್ಪ ಸವಣೂರ್, ಖಜಾಂಚಿ ಹಂಚಾಳಪ್ಪ ಕಳ್ಳಿಮನಿ, ಧರ್ಮದರ್ಶಿಗಳಾದ ಶ್ರೀಮತಿ ಅಂಜನಾದೇವಿ ಇನಾಮದಾರ್, ಶ್ರೀಮತಿ ಯಶೋಧಾ ಚಂದ್ರಹಾಸ ಬಂಡಿ, ಶೇಕಪ್ಪ ಸವಣೂರ್, ಬಸವರಾಜ್ ಸವಣೂರ್, ಗಣೇಶ್ ಕ್ವಾಟಿ, ಬಸವರಾಜ್ ಆಡಿವೆಪ್ಪ ಸವಣೂರ್, ಪರಶುರಾಮ ಚಿಂತಪ್ಪ ಸವಣೂರ್, ಸೇರಿದಂತೆ ದೇವಸ್ಥಾನದ ಬಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
Post a Comment