-->
Bookmark

Gadag : ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯರ ಕಡೆಗಣನೆ : ಸಾಹಿತಿ‌ ಕಮ್ಮಾರ್ ವಿಷಾದ

Gadag : ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯರ ಕಡೆಗಣನೆ : ಸಾಹಿತಿ‌ ಕಮ್ಮಾರ್ ವಿಷಾದ

ಗದಗ :(Jan_10_2025)

ಮುದ್ರಣ ಕಾಶಿ ಖ್ಯಾತಿಯ ಗದಗ ಜಿಲ್ಲೆ ಐತಿಹಾಸಿಕ ಹಿನ್ನೆಲೆಯ ತಾಣ, ಸೌಹಾರ್ದತೆ ಎಂದಾಕ್ಷಣ ನೆನಪಿಗೆ ಬರುವ ಜಿಲ್ಲೆ ಅದು ಗದಗ ಜಿಲ್ಲೆ, ಸಂಗೀತ ಲೋಕದ ಬ್ರಹ್ಮ ಪಂಡಿತ ಪುಟ್ಟರಾಜ ಗುರುವರ್ಯರು ನಡೆದಾಡಿ ಪಾವನಗೊಳಿಸಿದ ಈ ಪುಣ್ಯಭೂಮಿ ಗದುಗಿನಲ್ಲಿ ಜರುಗುವ ಕಾರ್ಯಕ್ರಮಗಳನ್ನು ನಮ್ಮ ರಾಜ್ಯದ ನೆರೆಯ ಬಹುತೇಕ ಜಿಲ್ಲೆಯ ಸಾಹಿತಿಗಳು ಪ್ರಶಂಸಿ ಗೌರವಿಸುತ್ತಾರೆ. ಇಂತಹ ವಿಶಿಷ್ಟ ಪರಂಪರೆಯ ಗದುಗಿನಲ್ಲಿ ಜರುಗುವ ಸಂಗೀತ, ಸಾಹಿತ್ಯ, ಕಲೆ ಮುಂತಾದ ಕಾರ್ಯಕ್ರಮಗಳು ಬಹಳಷ್ಟು ನೆಮ್ಮದಿ ಮತ್ತು ಖುಷಿ ನೀಡುವ ಮೂಲಕ ಇತರರಿಗೆ ಮಾದರಿ ಎನ್ನುವಂತಿರುತ್ತವೆ. ಈ ನಿಟ್ಟಿನಲ್ಲಿ ಗದಗ ಪರಿಸರದಲ್ಲಿ ನಡೆಯುವ ಕಾರ್ಯಕ್ರಮ ಅರ್ಥಪೂರ್ಣವಾಗಿರಲೆಂಬುದೇ ಗದಗ ಜಿಲ್ಲೆಯ ಅನೇಕ ಪ್ರಜ್ಞಾವಂತ ಹಿರಿಯರ ಆಶಯ. ಆದರೆ ಇತ್ತೀಚಿಗೆ ಗದಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗುವ ಕಾರ್ಯಕ್ರಮಗಳು ಬಹುತೇಕ ಹಿರಿಯ ಸಾಹಿತಿಗಳಿಗೆ ಬೇಸರವನ್ನುಂಟು ಮಾಡಿದೆ ಎಂದು ಹಿರಿಯ ಪತ್ರಕರ್ತ ಸಾಹಿತಿ ಐ.ಕೆ. ಕಮ್ಮಾರ ವಿಷಾದಿಸಿದ್ದಾರೆ.

2025 ಜನೇವರಿ 20 ಮತ್ತು 21 ರಂದು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ವಿಷಯ ಗೊತ್ತಾಗಿದ್ದು, ವಾಟ್ಸ್ಆಪ್ ಹಾಗೂ ಪತ್ರಿಕೆ ಮೂಲಕ ಮಾತ್ರ. ಜಿಲ್ಲಾಮಟ್ಟದ ಸಮ್ಮೇಳನ ಆಯೋಜನೆ ಮಾಡಬೇಕಾದರೆ ಗದಗ ಪಟ್ಟಣ ಸೇರಿದಂತೆ ಜಿಲ್ಲೆಯ ತಾಲೂಕಗಳಲ್ಲಿ ಅನೇಕ ಸಾಧಕರಿದ್ದಾರೆ. ಹಿರಿಯ ಸಾಹಿತಿಗಳಿದ್ದಾರೆ. ಯಾರಿಗೂ ತಿಳಿಸದೇ ಕೇವಲ ಬೆರಳಣಿಕೆಯಷ್ಟು ಪುಣ್ಯಾತ್ಮರನ್ನೇ ಆಹ್ವಾನಿಸಿ ತೆಗೆದುಕೊಳ್ಳುವ ನಿರ್ಧಾರ ಒಳ್ಳೆಯ ಬೆಳವಣಿಗೆ ಅಲ್ಲ. ಸಾಹಿತಿಗಳೆಂದರೆ ಪ್ರಜ್ಞಾವಂತರು, ವಿವೇಕಶೀಲರು, ಮನಸ್ಸು ಬೆಸೆಯುವ ಹೃದಯವಂತರು ಎಂದು ಜನ ಸಾಮಾನ್ಯರು ತಿಳಿದುಕೊಂಡಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಏಕಮುಖ ನಿರ್ಣಯ ತೆಗೆದುಕೊಳ್ಳುವ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಕ್ರಮ ಒಳ್ಳೆಯದಲ್ಲ ಒಬ್ಬ ಪ್ರಜ್ಞಾವಂತರ ಲಕ್ಷಣವಂತೂ ಅಲ್ಲ.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗಜೇಂದ್ರಗಡದಲ್ಲಿ ಏರ್ಪಡಿಸುವ ಕುರಿತು ತಾವು ಯಾರನ್ನು ಯಾವಾಗ ಆಹ್ವಾನಿಸಿದ್ದೀರಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಾವು ಆಯ್ಕೆಯಾಗಲು ವಿವೇಕಾನಂದಗೌಡ ಪಾಟೀಲರೇ ನಿಮಗೆ ಸಹಸ್ರಾರು ಜನ ಮತಹಾಕಿ ಗೌರವಿಸಿ, ತಮಗೊಂದು ವಿಶಿಷ್ಟ ಸ್ಥಾನಮಾನ ನೀಡಿದ್ದಾರೆ. ಎರಡು-ಮೂರು ವರ್ಷಕಾಲ ಕಾಲ ತಾವು ಗದಗ ಪರಿಸರದಲ್ಲಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಸೀಮಿತ


ವರ್ಗದವರನ್ನೇ ಗುರುತಿಸಿದ್ದು ಸಾಮಾನ್ಯರಿಗೂ ತಿಳಿಯುವಂತಿದೆ. ಕೇವಲ ಸೀಮಿತ ಜನರಿಂದ ಕನ್ನಡದ ತೇರು ಎಳೆಯುವ ಪ್ರಯತ್ನ ಅದು ಆತ್ಮವಂಚನೆ ಎಂಬುದು ಗಮನದಲ್ಲಿರಲಿ.

ತಾವು ಒಬ್ಬ ಗುರುಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವ ಅವಕಾಶ ಪರಮಾತ್ಮ ನಿಮಗೆ ನೀಡಿದ್ದಾನೆ. ಇಂತಹ ಸ್ಥಾನದಲ್ಲಿದ್ದುಕೊಂಡು ಸೀಮಿತ ಜನರಿಗೆ ತಾವು ಮಣಿ ಹಾಕಿದರಲ್ಲ ಇದು ಒಬ್ಬ ಸಾಹಿತಿ ಬರಹಗಾರನ ಲಕ್ಷಣ ಅಲ್ಲ. ಈ ಕುರಿತು ತಾವು ಸಿಂಹಾಲೋಕನ ಮಾಡಿಕೊಳ್ಳಬೇಕಾಗಿದೆ. ತಮ್ಮ ಹಠಮಾರಿತನದ ಧೋರಣೆ ಇಲ್ಲಿ ಎದ್ದು ಕಾಣುತ್ತದೆ. ಇದು ಸಾಹಿತ್ಯ ಪರಿಷತ್ತನ್ನು ಮುನ್ನಡೆಸುವ ಲಕ್ಷಣವಂತೂ ಅಲ್ಲ.

ಗಜೇಂದ್ರಗಡದಲ್ಲಿ ಆಯೋಜನೆ ಮಾಡಿದ ಜಿಲ್ಲಾ ಸಮ್ಮೇಳನ ಪೂರ್ವಸಿದ್ಧತೆ ಸಭೆಯನ್ನು ತಾವು ಎಲ್ಲಿ ಕರೆದಿದ್ದೀರಿ ಆ ಸಭೆಗೆ ತಾವು ಆಹ್ವಾನಿಸಿದ್ದು ಯಾರನ್ನು ಈ ಪ್ರಶ್ನೆಯನ್ನು ನಾವು ಕೇಳುವುದಕ್ಕಿಂತ ಮುಂಚೆ ನೀವೇ ಆಲೋಚನೆ ಮಾಡಿ ತಾವು ಆಯೋಜನೆ ಮಾಡಿದ ಪದ್ಧತಿ ಬಹುತೇಕ ಹಿರಿಯರ ಮನಸ್ಸು ಘಾಸಿ ಮಾಡಿದ್ದಂತೂ ಸತ್ಯ.

ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದೇಂದರೆ ಕನ್ನಡದ ಮನಸ್ಸುಗಳನ್ನು ಬೆಸೆಯುವಂತಿರಬೇಕು, ಹ್ಯಾವ, ಹಠಮಾರಿತನದಿಂದ ನಾವು ಏನನ್ನೂ ಸಾಧಿಸಲಾಗದು. ಜಿಲ್ಲೆಯ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟದ ಕೆಲಸ ಅಂತಾ ಸಾಮಾನ್ಯರಿಗೂ ಅರ್ಥವಾಗುತ್ತದೆ. ಆದರೆ ಜಿಲ್ಲೆಯ ಬಹುತೇಕ ಸಾಧಕ, ಸಾಹಿತಿಗಳ ಗಮನಕ್ಕೆ ಬಾರದಿರುವುದು ವಿಷಾದನೀಯ. ಈ ವಿಷಯ ತಿಳಿಸುವ ಉದ್ದೇಶ ಇಷ್ಟೇ ವಾಸ್ತವವನ್ನು ಹೇಳುವ ಪ್ರಯತ್ನ ನಮ್ಮದಾಗಿದೆ.

ಸಮ್ಮೇಳನಾಧ್ಯಕ್ಷರಲ್ಲಿ ಮನವಿ : ಗಜೇಂದ್ರಗಡದಲ್ಲಿ 2025 ಜನೇವರಿ 20 ಹಾಗೂ 21

ರಂದು ನಡೆಯಲಿರುವ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಆಯ್ಕೆ ಮಾಡಿದ್ದು ಹಿರಿಮೆ ಅಲ್ಲ ಕನ್ನಡದ ಮನಸ್ಸುಗಳು ಒಕ್ಕೂರಲಿನಿಂದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಇದು ನನಗೆ ಹೆಮ್ಮೆ ತಂದಿದೆ ಎಂದು ಸ್ವತಃ ಪ್ರೊ. ಚಂದ್ರಶೇಖರ ವಸ್ತ್ರದ ಅವರು ಹೇಳಿಕೊಂಡಿದ್ದಾರೆ. ಇದು ಅವರ ವಿಶಾಲ ಗುಣ ಎಂಬುದು ಮೇಲ್ನೋಟದಲ್ಲಿ ಕಾಣುತ್ತದೆ. ಚಂದ್ರಶೇಖರ ವಸ್ತ್ರದ ಅವರೇ ಗದಗ ಜಿಲ್ಲೆಯ ಸಾಹಿತಿಗಳ ಕನ್ನಡ ಮನಸ್ಸುಗಳ ಪರವಾಗಿ ತಮ್ಮಲ್ಲಿ ವಿನಂತಿ ತಾವು ಸರ್ವಾಧ್ಯಕ್ಷರಾಗಿ ಸಮ್ಮೇಳನ ಯಶಸ್ವಿಯಾಗಲೆಂಬ ಅಭಿಲಾಶೆ ಎಲ್ಲರಿಗೂ ಇದೆ. ಸಮ್ಮೇಳನಾಧ್ಯಕ್ಷರಾಗಿ ತಾವು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಾಧಕ, ಬಾಧಕಗಳ ಕುರಿತು ಮೆಲಕು ಹಾಕುವ ಅವಶ್ಯಕತೆ ಇದೆ. ಸಮ್ಮೇಳನಾಧ್ಯಕ್ಷರ ನುಡಿಯಲ್ಲಿ ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಗತಿ ಕುರಿತು ಸೇರ್ಪಡೆ ಮಾಡಿದರೆ ತಮ್ಮ ಅನುಭವವನ್ನು ವ್ಯಕ್ತಪಡಿಸಿದಂತಾಗುತ್ತದೆ.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವಂತಾಗಲಿ ನಮ್ಮದು ಸೌಹಾರ್ದತೆಯ ನಾಡು, ಈ ನಿಟ್ಟಿನಲ್ಲಿ ಕಾರ್ಯಕ್ರಮ ಜರುಗಲು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ, ಕಾಲ ಮಿಂಚಿಲ್ಲ ಇನ್ನೂ ತಮಗೆ ಸಾಕಷ್ಟು ಅವಕಾಶವಿದೆ ಎಂದು ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಐ.ಕೆ. ಕಮ್ಮಾರ್ : ಹಿರಿಯ ಸಾಹಿತಿ
ಮೊ : 9916314476
Post a Comment

Post a Comment