ಗದಗ : (Jan_09_2025)
ಜಿಲ್ಲಾ ಸಮ್ಮೇಳನಕ್ಕೆ ಸಮಿತಿಗಳನ್ನ ಕಳೆದೆರಡು ವರ್ಷಗಳ ಹಿಂದೆಯೇ ರಚಿಸಿದ್ದೇವೆ. ಈಗ ಸಮಿತಿ ರಚಿಸುವುದಿಲ್ಲ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಹೇಳಿದ್ದಾರೆ. ಕಿರಾ ನ್ಯೂಸ್ ಕನ್ನಡ ಸಂಪಾದಕರಾದ ಕೃಷ್ಣ ರಾಠೋಡ್ ಅವರೊಂದಿಗೆ ಮಾತನಾಡಿದ ಅವರು, ಸಮ್ಮೇಳನಕ್ಕೆ ಸಮಿತಿಗಳನ್ನ ಈಗಾಗಲೇ ರಚಿಸಲಾಗಿದೆ. ಅವರಿಗೆ ಆಹ್ವಾನಿಸುವ ಕೆಲಸ ಮಾತ್ರ ಬಾಕಿ ಇದೆ ಎಂದು ಸಮಜಾಯಿಸಿ ಕೊಟ್ಟರು.
ಜಿಲ್ಲಾ ಸಮ್ಮೇಳನ ನಡೆಸಲು ಕಳೆದೆರಡು ವರ್ಷಗಳಿಂದಲೇ ಪ್ರಯತ್ನಿಸುತ್ತಿದ್ದೇನೆ. ಕಾರಣಾಂತರದಿಂದ ಸಮ್ಮೇಳನ ಮುಂದೂಡಲಾಯ್ತು. ಕೆಲವೊಮ್ಮೆ ಮಳೆಯ ಕಾಟ ಮತ್ತೆ ಕೆಲವು ಸಲ ಮಕ್ಕಳ ಪರೀಕ್ಷಾ ಸಮಯ ಸೇರಿದಂತೆ ಹಲವು ಅಡೆತಡೆಗಳು ಎದುರಾದವು ಎಂದು ತಿಳಿಸಿದರು.
ಅಲ್ಲದೇ, ಸಮ್ಮೇಳನಕ್ಕೆ ಸಮಿತಿಗಳನ್ನ ರಚಿಸುವುದೆನಿಲ್ಲ. ಈಗಾಗಲೇ, ಸಮಿತಿಗಳನ್ನ ರಚಿಸಲಾಗಿದೆ. ಅದರಲ್ಲಿ ಮತ್ತೆ ಬದಲಾವಣೆಗಳಿಲ್ಲ. ಹಲವು ವರ್ಷಗಳ ಬಳಿಕ ಗಜೇಂದ್ರಗಡದಲ್ಲಿ ಸಮ್ಮೇಳನ ನಡೆಯುತ್ತಿದೆ. ಎಲ್ಲರ ಸಹಾಯ, ಸಹಕಾರ ವಿರಲಿ. ಒಬ್ಬರಿಂದ ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ಸಂಘಟನೆಗಳಿಗೆ, ಸಂಘ ಸಂಸ್ಥೆಗಳಿಗೆ, ಸಾಹಿತ್ಯಾಸಕ್ತರಿಗೆ ಎಲ್ಲರಿಗೂ ಆಹ್ವಾನಿಸುತ್ತೇವೆ. ಸಮಯದ ಅಭಾವದಿಂದ ಈ ರೀತಿ ಗೊಂದಲಗಳಾಗಿವೆ ಎಂದು ಮಾಹಿತಿ ನೀಡಿದರು.
ಸಭೆಗಳನ್ನ ಕರೆಯುವುದು, ಬೈಕ್ ರ್ಯಾಲಿ ಸೇರಿದಂತೆ ಅನೇಕ ಕೆಲಸ ಕಾರ್ಯಗಳು ಇನ್ನೆನು ಜರುಗಲಿವೆ ಎಂದರು. ಕನ್ನಡಾಭಿಮಾನಿಗಳೆಲ್ಲರನ್ನ ತಪ್ಪದೇ ಆಹ್ವಾನಿಸುತ್ತೇವೆ ಎಂದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಜಿಲ್ಲಾ ಸಮ್ಮೇಳನ 19 ರಿಂದ 21 ರ ವರೆಗೆ ನಡೆಯಲಿದೆ.
Post a Comment