ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ : ವಿವೇಕಾನಂದಗೌಡ ಪಾಟೀಲ್
ಗದಗ : (Jan_09_2025)
ವೇದಿಕೆಗೆ ನಿವೃತ್ತ ಶಿಕ್ಷಕ ದಿ. ಐ.ಎ ರೇವಡಿ ಅವರ ಹೆಸರು ಇಡುವ ಬೇಡಿಕೆಗೆ ಸಂಭಂಧಿಸಿದಂತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್, ಸಮಿತಿಗಳನ್ನ ಈಗಾಗಲೇ ರಚಿಸಲಾಗಿದೆ. ಈ ವಿಷಯವನ್ನ ಸಮಿತಿ ಮುಂದಿಡುತ್ತೇವೆ. ಎಲ್ಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಾವೊಬ್ಬರೆ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಗದಗ ಜಿಲ್ಲೆ ಬಿಟ್ಟರೇ, ಸಾಹಿತ್ಯ ಭವನ ನಿರ್ಮಾಣ ವಾಗಿದ್ದು ರೋಣದಲ್ಲಿ ಮಾತ್ರ, ತಾಯಿ ಭುವನೇಶ್ವರಿ ಫೋಟೋ ಅಧಿಕೃತವಾಗಿರಲಿ ಎಂದು ಪಾದಯಾತ್ರೆ ನಡೆಸಿ, ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಜೋತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಐ ಎ ರೇವಡಿ ಅವರ ಕೊಡುಗೆ ಅಪಾರವಾಗಿದೆ. ತಾಲೂಕು ಅಷ್ಟೇ ಅಲ್ಲದೇ, ಜಿಲ್ಲೆಯಲ್ಲೂ ಕನ್ನಡ ಸಾಹಿತ್ಯ ಪರಿಷತ್ ಗೆ ಅವರ ಕೊಡುಗೆ ಮರೆಯವಂತಿಲ್ಲ ಹೀಗಾಗಿ, ಜಿಲ್ಲಾ ಸಮ್ಮೇಳನ ನಡೆಯುವ ಮುಖ್ಯ ವೇದಿಕೆಗೆ ಐ.ಎ ರೇವಡಿ ಅವರ ಹೆಸರು ಇಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
Post a Comment