-->
Bookmark

Gadag : ಎಸ್.ಎಂ.ಸೈಯದ್ ಅತ್ತ್ಯುತ್ತಮ ತಾಲೂಕಾ ವರದಿಗಾರ : ಜಿಲ್ಲಾಡಳಿತದಿಂದ ಸನ್ಮಾನ

Gadag : ಎಸ್.ಎಂ.ಸೈಯದ್ ಅತ್ತ್ಯುತ್ತಮ ತಾಲೂಕಾ ವರದಿಗಾರ : ಜಿಲ್ಲಾಡಳಿತದಿಂದ ಸನ್ಮಾನ 

ಪತ್ರಿಕೋದ್ಯಮದಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿ ಸೈಯದ್ 

ಗದಗ : (Jan_26_2025)

ಜಿಲ್ಲಾಡಳಿತದಿಂದ ತಾಲೂಕಾ ಮಟ್ಟದ ಅತ್ತ್ಯುತ್ತಮ ವರದಿಗಾರರಾಗಿ ಎಸ್.ಎಂ. ಸೈಯದ್ ಅವರನ್ನ ಆಯ್ಕೆ ಮಾಡಿದ್ದಕ್ಕಾ ಜಿಲ್ಲಾಡಳಿತ ಪತ್ರಿಕಾ ಓದುಗರು, ಹಿತೈಷಿಗಳು, ಸ್ನೇಹಿತರಿಗೆ ಈ ಗೌರವ ಸಲ್ಲುತ್ತದೆ ಎಂದು ಗಜೇಂದ್ರಗಡ ತಾಲೂಕಾ ಕನ್ನಡಪ್ರಭ ವರದಿಗಾರ ಸೈಯದ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಕಳೆದ 13 ವರ್ಷಗಳಿಂದ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ವರದಿಗಳನ್ನ ಮಾಡಿದ್ದೇವೆ ಎಂದು ತಿಳಿಸಿದರು. 

ಯುವ ವರದಿಗಾರರೊಂದಿಗೂ ಬೆರೆಯುವ ಇವರು, ಕೆಲ ಸುದ್ದಿಗಳನ್ನ ಎಲ್ಲರೊಂದಿಗೂ ಚರ್ಚಿಸಿ ಬರೆಯುವುದು ಇವರ ಮತ್ತೊಂದು ವಿಶೇಷ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘಕ್ಕೂ ಆಭಾರಿ ಎಂದು ಸೈಯದ್ ಹೇಳಿದ್ದಾರೆ. 

ರಾಜ್ಯ ಸರ್ಕಾರ‌ ಗ್ರಾಮೀಣ ಭಾಗದ ವರದಿಗಾರರಿಗೆ ಉಚಿತ ಬಸ್ ಪಾಸ್ ಸೌಲಭ್ಯ‌ ಒದಗಿಸಲು‌ ಮುಂದಾಗುವುದರ ಜತೆಗೆ ಗ್ರಾಮೀಣ ಭಾಗದ ವರದಿಗಾರರನ್ನು‌ ಜಿಲ್ಲಾಡಳಿತದ ಮೂಲಕ ಗುರುತಿಸಲು ಮುಂದಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ‌ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್, ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಷ್ಢಾಧಿಕಾರಿ ಸೇರಿ‌ದಂತೆ ಅನೇಕರು ಉಪಸ್ಥಿತರಿದ್ದರು.  

ಕಿರಾ ನ್ಯೂಸ್ ಕನ್ನಡದ ಪರವಾಗಿ ಎಸ್.ಎಂ. ಸೈಯದ್ ಅವರಿಗೆ ಅಭಿನಂದನೆಗಳು...!
Post a Comment

Post a Comment