ಗದಗ : (Jan_27_2025)
ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಲಯ ಮುಂಬಾಗದಲ್ಲಿ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ ವೈ ಮುಧೋಳ್ ಧ್ವಜಾರೋಹಣ ನೆರವೇರಿಸಿದರು. ವಿವಿಧತೆಯಲ್ಲಿ ಏಕತೆಯ ಪ್ರತೀಕವೇ ಸಂವಿಧಾನ. ಸಂವಿಧಾನ ಜಾರಿಯಾದ ದಿನವನ್ನ ನಾವು ಸದಾ ನೆನೆಯುತ್ತೇವೆ. ನಮಗೆ ಭದ್ರ ಬುನಾದಿಯೇ ಸಂವಿಧಾನ ಎಂದು ಎಂ.ವೈ. ಮುಧೋಳ್ ಹೇಳಿದರು.
ಗಣರಾಜ್ಯೋತ್ಸವದ ಮಹತ್ವ ಕುರಿತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಹೆಚ್ ಕೊಪ್ಪಳ, ಎಂ ಎಸ್ ಪರ್ತ್ ಗೌಡ್ರು ಗಣರಾಜ್ಯೋತ್ಸವದ ಬಗ್ಗೆ ಸಮಗ್ರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಮುಖಂಡರಾದ ಶ್ರೀ ಈರಣ್ಣ ಬಾಳಿಕಾಯಿ, ಹಾಗೂ ಜಿಲ್ಲಾ ಹಾಗೂ ತಾಲೂಕು ಮುಖಂಡರಾದ ಗಿರೀಶ್ ಸಂಶಿ, ಸಿರಾಜ್ ಕದಡಿ , ಲಕ್ಷ್ಮಣ್ ಹಳ್ಳಿಕೇರಿ, ಲಕ್ಷ್ಮಣ್ ನಾಯಕ್, ಕೆ ಎಫ್ ದೊಡ್ಮನಿ. ಪ್ರಫುಲ್ ಪುಣೆಕರ್, ಸಂತೋಷ್ ಪಾಟೀಲ್, ಬಾದಶಾಹ ಬಾಗವಾನ್, ರಾಜೇಸಾಬ್ ತಹಶೀಲ್ದಾರ್, ಹಾಗೂ ಕರ್ನಾಟಕ ರಾಜ್ಯ ಡಾ// ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಂ ಪಿ ಮುಳುಗುಂದ್ ಹಾಗೂ ಸಂಘದ ಪದಾಧಿಕಾರಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post a Comment