-->
Bookmark

Gadag : ಕಡಲೆ ಖರೀದಿಸಿ ರೈತರಿಗೆ ಕೋಟ್ಯಾಂತರ ರೂ. ವಂಚಿಸಿದ ಆರೋಪಿಗಳು ಅರೆಸ್ಟ್

Gadag : ಕಡಲೆ ಖರೀದಿಸಿ ರೈತರಿಗೆ  ಕೋಟ್ಯಾಂತರ ರೂ ವಂಚನೆ : ಆರೋಪಿಗಳು ಅರೆಸ್ಟ್ 

ಗದಗ : (Jan_09_2025)

ಕಡಲೆ ಖರೀದಿಸಿ ರೈತರಿಗೆ ವಂಚನೆ ಮಾಡ್ತಿದ್ದ ಆರೋಪಿಗಳು ಕೊನೆಗೂ ಅರೆಸ್ಟ್ ಆಗಿದ್ದಾರೆ. ರೈತರಿಂದ ಕೋಟ್ಯಾಂತರ ಮೊತ್ತದ ಕಡಲೆ ಖರೀದಿ ಮಾಡಿ ಆರೋಪಿಗಳು‌ ನಾಪತ್ತೆಯಾಗಿದ್ದರು.‌
ಇದೀಗ ಗದಗ ಗ್ರಾಮೀಣ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರುತಿಗೌಡ ಹಾಗೂ ಶ್ರೀನಿವಾಸ್ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ದಾವಣಗೆರೆ ಮೂಲದ ಇಬ್ಬರು ಆರೋಪಿಗಳು, ರೈತರಿಂದ ಕಡಲೆ ಖರೀದಿ ಮಾಡಿ ಹಣ ಕೊಡದೆ ಪರಾರಿಯಾಗಿದ್ರು. ರೈತರಿಗೆ ಕೊಡಬೇಕಿದ್ದ 6 ಕೋಟಿ 50 ಲಕ್ಷ ಕೊಡದೆ ವಂಚನೆ ಮಾಡಿ, ಪರಾರಿಯಾಗಿದ್ದರು.‌


ಸಂಜೀವಿನಿ ಒಕ್ಕೂಟದ ಮೂಲಕ ಗದಗ ಜಿಲ್ಲೆಯ 450 ರೈತರಿಂದ 370 ಟನ್ ಕಡಲೆ ಖರೀದಿಸಿ ಮಾಡಿ, ರೈತರಿಗೆ ಜೊತೆ 27 ಕೋಟಿ ರೂಪಾಯಿ ವಹಿವಾಟು ನಡೆಸಿದ್ದರು. ಆ ಪೈಕಿ 20 ಕೋಟಿ 50 ಲಕ್ಷ ಪಾವತಿ ಮಾಡಿ, ಉಳಿದ 6 ಕೋಟಿ 50 ಲಕ್ಷ ಕೊಡದೆ ತಲೆಮರೆಸಿಕೊಂಡಿದ್ದರು.

ಕಳೆದ ಒಂದು ವರ್ಷದಿಂದ ಬಾಕಿ ಮೊತ್ತಕ್ಕಾಗಿ ರೈತರು ಹೋರಾಟ ಮಾಡಿದ್ದರು. ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಸಹ ಅಹೋರಾತ್ರಿ ಧರಣಿ ನಡೆಸಿದ್ದಾರೆ. ನಿನ್ನೆ ಹೋರಾಟದ ವೇಳೆ ಇಬ್ಬರು ರೈತ ಮಹಿಳೆಯರಾದ, ಗೀತಾ ಹಾಗೂ ಸರಸ್ವತಿ ಅನ್ನೋರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗದಗ ಜಿಲ್ಲಾ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ಸಿದ್ಧರಾಮೇಶ ಅವರ ತಂಡ, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Post a Comment

Post a Comment