ಬಿಕೋ ಎನ್ನುತ್ತಿರುವ ಪುಸ್ತಕ ಮಳಿಗೆಗಳು
ಯುವ ಸಮೂಹವನ್ನ ಸೆಳೆಯುವಲ್ಲಿ ವಿಫಲ
ಗಜೇಂದ್ರಗಡ :
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಯ ಆಗರವಾಗಿ ಕಂಡು ಬಂತು. ಉದ್ಘಾಟನೆ ವೇಳೆ ಸಮ್ಮೇಳನಾಧ್ಯಕ್ಷರಿಗೆ ಅಗೌರವ ತೋರಿದ್ದು, ತಾಯಿ ಭುವನೇಶ್ವರಿಗೆ ಮಾಡಿದ ಅವಮಾನವೇ ಸರಿ ಎಂಬ ಆರೋಪ ಕೇಳಿ ಬಂದಿದೆ.
ಮತ್ತೊಂದೆಡೆ ಪ್ರಚಾರ ಇಲ್ಲದೇ, ಪುಸ್ತಕ ಮಳಿಗೆಗಳು ಬಿಕೊ ಎನ್ನುತ್ತಿದ್ವು. ಜಾತ್ರೆಯಂತಾಗಬೇಕಾದ ಕನ್ನಡ ಹಬ್ಬದಲ್ಲಿ ಅಕ್ಷರಶಃ ಅವ್ಯವಸ್ಥೆ ಕಂಡು ಬಂತು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಿದ್ದಾರೆ. ಆದರೇ, ಅವರಿಗೆ ಆಮಂತ್ರಣ ಪತ್ರಿಕೆ ತಲುಪಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ. ಆದ್ರೆ, ಊರಾಚೆ ಸಮ್ಮೇಳ ಹಮ್ಮಿಮಿಕೊಂಡು ಜನರಿಂದ ದೂರ ಇರುವ ಪ್ರಯತ್ನ ಮಾಡಿದಾರೆ. ಅನ್ನೋ ಹಾಗೆ ಕಾರ್ಯಕ್ರಮ ನಡೆಸಿದ್ದಾರೆ.
ಜಿಲ್ಲಾ ಸಮ್ಮೇಳನಕ್ಕಿಂತ ಶಾಲಾ ವಾರ್ಷಿಕೋತ್ಸವಕ್ಕೆ ಹೆಚ್ಚಿನ ಉತ್ಸಾಹ ಇರ್ತಿತ್ತು ಎಂದು ಕನ್ನಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳೊಂದಿಗೆ ಪಾಲಕರು ಬರ್ತಿದ್ರು, ಆದ್ರೀಗ ಆಧುನಿಕ ಭರಾಟೆಯಲ್ಲಿ ಎಲ್ಲರೂ ಬದಲಾಗಿದ್ದಾರೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಜಿಲ್ಲಾ ಸಮ್ಮೇಳನ ನಡೆಯಲೇ ಇಲ್ಲ. ಯುವ ಸಮೂಹವನ್ನ ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿದೆ.
ಪುಸ್ತಕ ಮಳಿಗೆಗಳಿಗೆ ಓದುಗರ ಕೊರತೆ ಕಂಡು ಬಂತು. Main ಗೇಟ್ ನಿಂದ ಒಳಗೆ ಪ್ರವೇಶಿಸುತ್ತಿದ್ದಂತೆ ಎರಡು ಬದಿ ಇರಬೇಕಾದ ಕನ್ನಡ ಪುಸ್ತಕ ಮಳಿಗೆಗಳು ಅಲ್ಲಿಂದ ನಾಪತ್ತೆಯಾಗಿದ್ವು.
ರಸ್ತೆ ಪಕ್ಕದಲ್ಲಿ ಬ್ಯಾರಿಕೇಡ್ ಗಳು ಪುಸ್ತಕ ಮಳಿಗೆಗಳಿಗೆ ಹೋಗದಂತೆ ತಡೆದವು. ಜಿಲ್ಲಾ ಸಮ್ಮೇಳನದಲ್ಲಿ ಬಲೂನ್ ಗಳ ಮಾರಾಟಗಾರರು ಕಾಣಲಿಲ್ಲ. ಮಕ್ಕಳ ಆಟಿಕೆ ಮಾರುವವರು ಕಾಣಲಿಲ್ಲ. ಜನರಲ್ಲಿ ಆಸಕ್ತಿ ಮೂಡಿಸುವಂತಿರಬೇಕಾದ ಸಮ್ಮೇಳನ ಅಕ್ಷರಶಃ ಜನರಿಗೆ ನಿರಾಸಕ್ತಿ ಮೂಡಿಸಿದಂತಿತ್ತು.
ಕಾಟಾಚಾರಕ್ಕೆ ಜಿಲ್ಲಾ ಸಮ್ಮೇಳನ ಆಯೋಜಿಸಿದಂತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
Post a Comment