ಧಾರವಾಡದ ಹಳಿಯಾಳ ರಸ್ತೆಯ ಕೆ.ಐ.ಡಿ.ಬಿ ಕಾಲೊನಿ ಹತ್ತಿರ ಸದ್ಗುರು ನಗರದಲ್ಲಿ ನೂತನವಾಗಿ ಸಂತ ಸೇವಾಲಾಲ್ ಮತ್ತು ತಾಯಿ ಮರಿಯಮ್ಮ ದೇವಿ ದೇವಸ್ಥಾನ ನಿರ್ಮಾಣವಾಗಿದೆ. ಬಂಜಾರ ಸಮುದಾಯದ ಅಭಿವೃದ್ಧಿ ಕನಸು ಕಂಡ ನಾಯಕರಲ್ಲಿ ಸೀತಾರಾಮ್ ಪವಾರ್ ಅವರೂ ಕೂಡ ಒಬ್ಬರು. ಅವರ ಕನಸಿನ ಕೂಸಾದ ದೇವಸ್ಥಾನ ನಿರ್ಮಾಣವಾಗಿದೆ. ಈಗ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ.
ಈಗಾಗಲೇ ಎಲ್ಲ ಕೆಲಸ ಕಾರ್ಯಗಳು ಮುಗಿದಿದ್ದು, ಗದ್ದುಗೆ ಪೂಜೆಯನ್ನ ಜನವರಿ 31 ರಂದು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಮಾತನಾಡಿದ ಸೀತಾರಾಮ್ ಪವಾರ್ ಅವರು, ನಾವೊಬ್ಬರೇ ಮುಂದೆ ಬರದೇ ಸಮಗ್ರ ಸಮುದಾಯವನ್ನ ಮುಂಚೂಣಿಯಲ್ಲಿ ಕೊಂಡೊಯ್ಯಬೇಕಿದೆ ಎಂದರು.
Post a Comment