Dharwad : ಬಡವರ ಪಾಲಿನ "ಜ್ಯೋತಿ ಕಿರಣ್"
ಸಮಾಜ ಸೇವೆಗೆ ಮತ್ತೊಂದು ಹೆಸರೇ "ಜೆಕೆ"
"ಜ್ಯೋತಿ" ಮುಟ್ಟಿದ್ದೆಲ್ಲವೂ ಚಿನ್ನ
ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಕನಸಿನ "ಹೊಂಬೆಳಕು"
ಧಾರವಾಡ : (Jan_16_2025)
ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಹಾಡುಹಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಮಹಿಳಾ ಕಾರ್ಯದರ್ಶಿ, ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಾಡಿರುವ ಡಾ. ಜ್ಯೋತಿ ಕಿರಣ್ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಧಾರವಾಡದಲ್ಲಿ ನೆಲೆಸಿರುವ ಜ್ಯೋತಿ ಕುಟುಂಬ ಜಿಲ್ಲೆಯಾದ್ಯಂತ ಶಾಲಾ, ಕಾಲೇಜು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ, ರಾಜ್ಯದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು. ಎಲ್ಲ ಜಿಲ್ಲೆಯಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಕನಸಿನ ಜೊತೆಗೆ ಗ್ರಾಮೀಣ ಭಾಗದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವವರೆಗೂ ಹೋರಾಟ ನಡೆಸುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲಿಕರಣದ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುವ ಇವರು,
ಹಿಂದು ಸಂಸ್ಕೃತಿಯನ್ನ ಬೆಳೆಸುವ ವೇದಾಧ್ಯಯನ ಮಾಡುವುದರ ಜೊತೆಗೆ ಮನಶಾಂತಿ, ಮುಕ್ತಿಗಾಗಿ ದೈವತ್ವವನ್ನ ಯುವ ಸಮೂಹಕ್ಕೆ ಊಣ ಬಡಿಸುತ್ತಾರೆ. ಹಿಂದು ಸಂಸ್ಕೃತಿ ಇವರ ಬ್ಲಡ್ ನಲ್ಲೆ ಬಂದಿದೆ.
ಬಡವರಿಗೆ ಉಚಿತ ಆಹಾರ ವಿತರಿಸುವ ಉದ್ದೇಶದಿಂದ ಮತ್ತು ಗೋಮಾತಾಗಳಿಗೆ, ಬೀದಿ ನಾಯಿಗಳಿಗೆ ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟ ಸಾಧಿಸಲು ತಮ್ಮದೇ ಆದ ಎನ್.ಜಿ.ಓ ಆರಂಭಿಸಲು ಚಿಂತನೆ ನಡೆಸಿರುವ ಇವರು, ಮಳೆಗಾಲದಲ್ಲಿ ಬೀದಿಗಳಲ್ಲಿ ಗಿಡ, ಮರಗಳನ್ನ ಬೆಳೆಸುತ್ತಾರೆ. ಸ್ವಚ್ಛ ಭಾರತ ಅಭಿಯಾನದಡಿ ಧಾರವಾಡ ಜಿಲ್ಲೆಯಾದ್ಯಂತ ಸ್ವಚ್ಛತಾಕಾರ್ಯ, ರಕ್ತದಾನ ಶಿಬಿರದ ಮೂಲಕ ಬಡವರಿಗೆ ಮೊದಲ ಆದ್ಯತೆ ನೀಡ್ತಾರೆ.
ಸರ್ಕಾರದ ಯೋಜನೆಯನ್ನ ಸಮಾಜದ ಕೊನೆ ಸ್ಥರದ ವ್ಯಕ್ತಿಗೆ ತಲುಪಿಸಲು ಜಾಗೃತಿ ಮೂಡಿಸುವುದು, ಯೋಜನೆಯನ್ನ ತಲುಪಿಸುವ ಕಾರ್ಯ ಮಾಡ್ತಾರೆ.
ಗ್ರಾಮೀಣ ಭಾಗದ ಜನರು ಹಸುಗಳನ್ನ ಸಾಕಾಣಿಕೆ ಮಾಡುತ್ತಾರೆ. ಆದ್ರೆ, ದೇಶಿ ಹಸುಗಳಿಗೆ ಬೇರೆ ಮತ್ತು ವಿದೇಶಿ ತಳಿಗಳಿಗಳ ಹಸುಗಳ ಸಾಕಾಣಿಕೆ ಮತ್ತು ನೊಡಿಕೊಳ್ಳುವ ವಿಧಾನದ ಬಗ್ಗೆಯೂ ಜಾಗೃತಿ ಮೂಡಿಸುತ್ತಾರೆ.
ಸರ್ಕಾದ ಯೋಜನೆಯಲ್ಲಿ ಒಂದಾದ ಕೃಷಿ ಹೊಂಡ ಕೊರೆಸುವ ಬಗ್ಗೆಯೂ ಗ್ರಾಮೀಣ ಭಾಗದ ರೈತರಿಗೆ ಮಾಹಿತಿ ನೀಡುತ್ತಾರೆ.
ಯಲ್ಲಾಪುರದಲ್ಲಿ ಹುಟ್ಟಿ ಬೆಳೆದ ಜ್ಯೋತಿ ಅವರು ಪ್ರಾಥಮಿಕ ಮತ್ತು ಶಾಲಾ, ಕಾಲೇಜು ಶಿಕ್ಷಣವನ್ನ ಯಲ್ಲಾಪುರದಲ್ಲೆ ಮಾಡಿರುವ ಇವರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಆಸ್ಪತ್ರೆಯಲ್ಲಿ ನರರೋಗ ಮತ್ತು ಹೃದಯ ರೋಗ ಸಂಬಂಧಿತ ಖಾಯಿಲೆಗಳಿಗೆ ದುಬಾರಿ ವೆಚ್ಚದ ಶಸ್ತ್ರ ಚಿಕಿತ್ಸೆಯನ್ನ ಎಲ್ಲರಿಗೂ ಸಿಗುವಂತೆ ಮಾರ್ಗದರ್ಶನ ನೀಡಿ, ಹಲವು ಶಸ್ತ್ರ ಚಿಕಿತ್ಸೆಯನ್ನ ಮಾಡಿಸಿ, ಬಡವರ ಪಾಲಿಗೆ ಜ್ಯೋತಿ ಕಿರಣರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಧುನಿಕ ಶೈಲಿಯ ಜೀವನದಿಂದ ನರರೋಗ, ಮತ್ತು ಹೃದಯ ಸಂಭಂಧಿತ ಖಾಯಿಲೆಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಯುವ ಸಮೂಹಕ್ಕೆ ಕರೆ ನೀಡಿದರು ಡಾ. ಜ್ಯೋತಿ ಅವರು.
ಬಡವರ ಪಾಲಿನ ಜೀವನ ಬೆಗಳುವ ಜ್ಯೋತಿ ಸದಾ ಹೀಗೆ ಬೆಳಗಲಿ ಎಂದು ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಜೊತೆಗೆ ನ್ಯೂಸ್ ಕನ್ನಡದಿಂದ ಸಹ ಡಾ. ಜ್ಯೋತಿ ಅವರಿಗೆ ಶುಭ ಹಾರೈಕೆಗಳು...!!!
Post a Comment