-->
Bookmark

ಡಾ. ಜಯಶ್ರೀ ಪಾಟೀಲ್ ನೇತೃತ್ವದಲ್ಲಿ ಕರುಗಳ ಪ್ರದರ್ಶನ, ಹಾಲಿನ ಕ್ಯಾನ್ ವಿತರಣೆ

Gajendragad : ಕರುಗಳ ಪ್ರದರ್ಶನ, ಹಾಲಿನ ಕ್ಯಾನ್ ವಿತರಣೆ 

ಡಾ. ಜಯಶ್ರೀ ಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ 

ಗಜೇಂದ್ರಗಡ : (Jan_30_2025)

ಪಟ್ಟಣದ ತಾಲೂಕು ಪಶು ಆಸ್ಪತ್ರೆ ಸಹಯೋಗದಲ್ಲಿ ಗೋಗೇರಿಯಲ್ಲಿ ಕರುಗಳ ಪ್ರದರ್ಶನ ನಡೆಯಿತು. ಗೋಗೇರಿಯಲ್ಲಿ ನಡೆದ ಹಸುಗಳ ಪ್ರದರ್ಶನದಲ್ಲಿ ರೈತರು ತಮ್ಮ ತಮ್ಮ ಹಸುಗಳೊಂದಿಗೆ ಭಾಗವಹಿಸಿದ್ದರು. ಇದೇ ವೇಳೆ, ರೈತರಿಗೆ ಹಾಲಿನ ಕ್ಯಾನ್ ಗಳನ್ನ ವಿತರಿಸಲಾಯ್ತು. ಹಸುಗಳಿಗೆ ಕಡ್ಡಿಹಾಕುವಾಗ ಹಸುಗಳ ಆರೋಗ್ಯ ಕಾಳಜಿ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯ್ತು. ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಆದೇಶಾನುಸಾರ ಆಸ್ಪತ್ರೆ ಕೆಲಸ ಕಾರ್ಯವನ್ನ ಸಾರ್ವಜನಿಕವಾಗಿ ವಿವರಿಸಿದರು.‌ ಈ ವೇಳೆ ತಾಲೂಕಾ ಪಶುವೈದ್ಯಾಧಿಕಾರಿ  ಡಾ. ಜಯಶ್ರೀ ಪಾಟೀಲ್, ಡಾ. ಶುಷ್ಮಾ ಬೆಲ್ಲದ್, 
ಸಿಬ್ಬಂದಿಗಳಾದ ರಜನಿ ಸಿಂಹಾಸನದ್, ಮಂಜುನಾಥ್ ಸರಗಣಾಚಾರಿ  ಸೇರಿದಂತೆ ಆಸ್ಪತ್ರೆ ಎಲ್ಲ ಸಿಬ್ಬಂದಿಗಳು, ಗ್ರಾಮದ ರೈತರು ಭಾಗವಹಿಸಿದ್ದರು.
Post a Comment

Post a Comment