-->
Bookmark

Bengaluru : ಜೆಡಿಎಸ್ ಮುಖಂಡ ಮಕ್ತುಮಸಾಬ್ ಮುಧೋಳ್ ಹೆಗಲಿಗೆ ಹೆಚ್ಚಿನ ಜವಾಬ್ದಾರಿ

Bengaluru : ಜೆಡಿಎಸ್ ಮುಖಂಡ ಮಕ್ತುಮಸಾಬ್ ಮುಧೋಳ್ ಹೆಗಲಿಗೆ ಹೆಚ್ಚಿನ ಜವಾಬ್ದಾರಿ 


ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ನಿರ್ಧಾರ 


ಬೆಂಗಳೂರು : (Jan_31_2025)

ಮುಂಬರುವ ದಿನಗಳಲ್ಲಿ ಸದಸ್ಯತ್ವ ನೊಂದಣಿ ಮಾಡಲಾಗುವುದು. ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮುತುವರ್ಜಿ ವಹಿಸಿ, ಕಾರ್ಯಕರ್ತರು ಮುಂದೆ ಬರುತ್ತಿದ್ದು, ಜವಾಬ್ದಾರಿ ಹೆಚ್ಚಿಸಿದೆ ಎಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಹೇಳಿದರು. ಬೆಂಗಳೂರಿನ ಜೆಪಿ ಭವನದಲ್ಲಿ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಜೆಡಿಎಸ್ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದೆ. ಅದಕ್ಕೆ ಗದಗ ಜಿಲ್ಲೆಯಲ್ಲಿ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷದ ಹಿರಿಯ ಮುಖಂಡರು, ಹೇಳಿದ ಕೆಲಸ‌ ಮಾಡುವ ನಾನು ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಕ್ಕೆ, ಹಿರಿಯ ಮುಖಂಡರು, ಮಕ್ತುಮಸಾಬ್ ಮುಧೋಳ್ ಅವರಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. 

ಇನ್ನೂ, ಜೆಡಿಎಸ್ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮತ್ತು ಜಿಲ್ಲಾ ಉಸ್ತುವಾರಿಗಳ ಸಭೆಯಲ್ಲಿ ಮುಂಬರುವ ಚುನಾವಣೆಯ ಬಗ್ಗೆ ಮುಖಂಡರಿಗೆ ತಿಳಿಸಲಾಯ್ತು. ಜೊತೆಗೆ ಪಕ್ಷ ಸಂಘಟನೆಗೆ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕೆಂದು ಜಿಲ್ಲಾಧ್ಯಕ್ಷರಿಗೆ ಹೇಳಲಾಯ್ತು. ಇನ್ನೂ, ಪರಿಷತ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ ತಮ್ಮ‌ ಅಧಿಕಾರಾವಧಿ ಪೂರ್ಣಗೊಳಿಸಿದ್ದಕ್ಕಾಗಿ ಅವರಿಗೆ ಸನ್ಮಾನಿಸಲಾಯ್ತು.
Post a Comment

Post a Comment