-->
Bookmark

Bengaluru : ಮುಂಬರುವ ದಿನಗಳಲ್ಲಿ ಚುನಾವಣೆ ಮೂಲಕ ಜೆಡಿಎಸ್ ನಾಯಕರ ಆಯ್ಕೆ : HDK

Bengaluru : ಮುಂಬರುವ ದಿನಗಳಲ್ಲಿ ಚುನಾವಣೆ ಮೂಲಕ ಜೆಡಿಎಸ್ ನಾಯಕರ ಆಯ್ಕೆ : HDK 

ಮಕ್ತುಮಸಾಬ್ ಮುಧೋಳ್ ಹೆಗಲಿಗೆ ಗದಗ ಜಿಲ್ಲೆಯ ಹೊಣೆ 
ಬೆಂಗಳೂರು : ( Jan_12_2025)

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಭರದ ಸಿದ್ಧತೆ ನಡೆಸಿದೆ. ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ನೇತೃತ್ವದಲ್ಲಿ ಬೆಂಗಳೂರಿನ ಜೆಪಿ ನಗರದ ಮನೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಾದ್ಯಂತದಿಂದ ಕಾರ್ಯಕರ್ತರು ಆಗಮಿಸಿದ್ದರು.‌ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಪಕ್ಷಕ್ಕೆ ಆಯ್ಕೆಯಾಗುವ ನಾಯಕರನ್ನ ಚುನಾವಣೆ ಮೂಲಕ ಆಯ್ಕೆ ಮಾಡಬೇಕೆಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ ಹೇಳಿದರು.‌ ಪಕ್ಷದ ಕಾರ್ಯಕರ್ತರಿಗೆ ಸ್ಥಳೀಯ ಮಟ್ಟದಿಂದ ಆಯ್ಕೆ ಮಾಡುವುದು ಮತ್ತು ಪಕ್ಷ ಸಂಘಟಿಸುವ ಉದ್ದೇಶದಿಂದ ಕಾರ್ಯಕರ್ತರ ಸಭೆ ನಡೆಸಿದ್ದೇವೆ ಎಂದರು.
ಸಭೆಯಲ್ಲಿ ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಮಕ್ತುಮಸಾಬ್ ಮುಧೋಳ್ ಸಹ ಭಾಗವಹಿಸಿದ್ದರು. ಲೋಕಸಭೆ ಚುನಾವಣೆ ವೇಳೆ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿ, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಮಕ್ತುಮಸಾಬ್ ಮುಧೋಳ್ ಅವರ ಕಾರ್ಯವನ್ನ ಶ್ಲಾಘಿಸಿದರು.‌ 

ಗದಗ ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ಮಕ್ತುಮ್ ಅವರ ಹೆಗಲಿಗಿದ್ದು, ಜಿಲ್ಲಾ ಮಟ್ಟದ ಕಾರ್ಯ ಚಟುವಟಿಕೆಯನ್ನ ನೋಡಿಕೊಳ್ಳುವುದು, ಪಕ್ಷ ಸಂಘಟಿಸುವುದು, ಮತ್ತು ಹೊಸ ಮತದಾರರನ್ನ ಜೆಡಿಸ್  ನತ್ತ ಸೆಳೆಯುವ ಕಾರ್ಯ ಮಾಡಬೇಕಿದೆ. ಅಲ್ಲದೇ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ರಾಜ್ಯಕ್ಕೆ ನೀಡಿದ ಕೊಡುಗೆಯನ್ನ ಪ್ರತಿ ಮತದಾರರಿಗೂ ತಿಳಿಸುವ ಮಹತ್ವದ ಕಾರ್ಯ ಮಾಡಬೇಕಿದೆ ಎಂದು ಮಕ್ತುಮಸಾಬ್ ಮುಧೋಳ್ ಅವರಿಗೆ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ಮತ್ತು ಹೆಚ್.ಡಿ ದೇವೇಗೌಡ ಹೇಳಿದ್ದಾರೆ. 
Post a Comment

Post a Comment