ಸಮೀಪದ ಸೂಡಿ ಗ್ರಾಮ ಹುಡೇದಗಡ್ಡ ಬಳಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 27ನೇ ಗಣೇಶ ಜಯಂತಿ ಫೆ. 1ರಂದು ನಡೆಯಲಿವೆ.
ಪಟ್ಟಣದಲ್ಲಿ ದೇಗುಲ ಧರ್ಮದರ್ಶಿ ಕಿರಣ ಗಣಪತಿಭಟ್ ಜೋಶಿ ಮಾತನಾಡಿ, ಶಾಸನಗಳು, ದೇವಾಲಯಗಳು ರಾಷ್ಟ್ರ ಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಮಹಾಗಣಪತಿ ದೇಗುಲ ವಾಗಿದೆ ಎಂದರು.
ಏಕಶಿಲೇಯಲಿ ಮೂರು ಅಡಿ ಎತ್ತರವಿರುವ ಮಹಾಗಣಪತಿ ಶಿಲ್ಪವು ವಿಶಿಷ್ಟವಾಗಿದೆ. ನಿತ್ಯ ಪೂಜೆಗೊಳ್ಳುತ್ತ ಬಂದಿದೆ. ಪ್ರಾತಃ ಕಾಲ ಧರ್ಮಧ್ವಜಾ ರೋಹಣ, 21 ದ್ರವ್ಯಗಳ ಅಭಿಷೇಕ, ಪುಣ್ಯಾಹವಾಚನ, ಸಿದ್ಧಿಫಲ, ದೇವತಾ ಸ್ಥಾಪನೆ ಸತ್ಯಗಣಪತಿ ವ್ರತ, ಸಹಸ್ರ ಮೋದಕ ಹವನ, ನವಚಂಡಿ ಹವನ, ಪೂರ್ಣ ಕುಂಭದೊಂದಿಗೆ ಉತ್ಸವ ಮೂರ್ತಿಯೊಂದಿಗೆ ಗ್ರಾಮ ಪ್ರದಕ್ಷಣೆ ನಂತರ ಸಹಸ್ರ ಮೋದಕ ಗಣಪತಿ ಹವನ, ನವಚಂಡಿ ಹವನ ಬಳಿಕ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ಧರ್ಮಸಭೆ ಬಳಿಕ ಹುಬ್ಬಳ್ಳಿ ದಿ. ಮಾತಾರ್ಂಡ ದೀಕ್ಷಿತರ ಪುಣ್ಯಸ್ಮರಣೆ ನಿಮಿತ್ತ ಪಾದಪೂಜೆ ನಡೆಯಲಿದೆ ಎಂದರು. ಕಿರಣ ಜೋಶಿ, ಸಿ.ಆರ್. ಜೋಶಿ, ಭುಜಂಗ ಶರ್ಮಾ ಜೋಶಿ, ಡಾ. ಅರುಣ ಜೋಶಿ, ಶೇಷಾಚಲ ಜೋಶಿ ಇನ್ನಿತರು ಇದ್ದರು.
Post a Comment