-->
Bookmark

Karwar : ಲೋಕ ಕಲ್ಯಾಣಕ್ಕಾಗಿ ನಡೆದ ಮೊದಲ‌ ಪೂಜೆ

Karwar : ಲೋಕ ಕಲ್ಯಾಣಕ್ಕಾಗಿ ನಡೆದ ಮೊದಲ‌ ಪೂಜೆ 
ವಿಶೇಷ ಪೂಜಾ ಕೈಂಕರ್ಯಕ್ಕೆ ಸಾಕ್ಷಿಯಾದ ಶಾಸಕ ಸೈಲ್ 
Positive Energy ಗೆ ಹೆಸರಾದ ಬಿಣಗಾದ ಮಹಾನಾಯಕ್ ತಾಂಡಾ
ಕಾರವಾರ : (Dec_03_2024)

ಡಿಸೆಂಬರ್ 1ರ ರಂದು ಕಾರವಾರ ಬಿಣಗಾದ ಸೀತಾನಗರ ಮಹಾನಾಯಕ ತಾಂಡಾದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.‌ ಮರಿಯಮ್ಮ ದೇವಿ ದೇವಸ್ಥಾನ ಪ್ರತಿಷ್ಠಾನದ ನಂತರ ನಡೆದ ಮೊದಲ ಪೂಜೆ ಇದಾಗಿತ್ತು. ಮೊದಲ ಪೂಜೆಯನ್ನ ಲೋಕ ಕಲ್ಯಾಣಕ್ಕಾಗಿ ಮಾಡಲಾಯ್ತು. ಉತ್ತರ ಕನ್ನಡ ಜಿಲ್ಲೆಯನ್ನ ರಕ್ಷಿಸುತ್ತಿರುವ ಪ್ರಕೃತಿಗೆ ಮೊದಲ ಕೃತಜ್ಞತೆಯೂ ಸಲ್ಲಿಸಿದರು. ಮೂರು ಕಡೆ ಬೆಟ್ಟ ಒಂದು ಕಡೆ ಕಡಲು ತನ್ನ ಮಡಿಲಲ್ಲಿ ಬೆಚ್ಚಗೆ ಕುಳಿತಿರುವ ಉತ್ತರ ಕನ್ನಡ ಜಿಲ್ಲೆಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಲಾಯ್ತು. 
ಬಂಜಾರ ಸಮೂದಾಯ ಸದಾ ಪ್ರಕೃತಿಯೊಂದಿಗೆ ಒಡನಾಟ ಹೊಂದಿದ್ದು, ಕೆಳ ಸಮುದಾಯದ ಅಭಿವೃದ್ಧಿಗೆ ಸದಾ ಬದ್ಧ ಎಂದು ಶಾಸಕ ಸತೀಶ್ ಸೈಲ್ ತಮ್ಮ ಅನಿಸಿಕೆ ಹಂಚಿಕೊಂಡರು. 
ತಾಂಡಾದ ಅಭಿವೃದ್ಧಿ ಜೊತೆಗೆ ತಾಲೂಕಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. 

ಈ ಹಿಂದೆ ಇಲ್ಲಿ ಸೇವಾಲಾಲ್ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದಾಗ, ಇಷ್ಟಾರ್ಥ ಸಿದ್ದಿಗಾಗಿ ಭಕ್ತರ ದಂಡೆ ಹರಿದು ಬಂದಿತ್ತು. ಈಗ ಮತ್ತೆ ಭಕ್ತರ ಬೇಡಿಕೆ ಈಡೇರಿಸುವ ಪಾಸಿಟಿವ್ ಎನರ್ಜಿ ಇರುವ ಸ್ಥಳವಾಗಿ ಗುರುತಿಸಿಕೊಳ್ಳುತ್ತಿರುವ ಮಹಾನಾಯಕ್ ತಾಂಡಾ ಸರ್ವರ ಏಳಿಗೆಯನ್ನ ಬಯಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಾರ್ಯಕ್ರಮಕ್ಕೆ ಡಾ. ಜಗನ್ನಾಥ್ ರಾಠೋಡ್, ತಾಂಡಾದ ನಾಯಕ ಮಂಜುನಾಥ್ ರಾಠೋಡ್, ಸೇರಿದಂತೆ ತಾಂಡಾದ ಇತರೆ ಪ್ರಮುಖರು & ಬಂಜಾರ ಸಮುದಾಯ ಬಾಂಧವರು ಸಾಕ್ಷಿಯಾದ್ರು.
Post a Comment

Post a Comment