ಗಜೇಂದ್ರಗಡ : ( Dec_18_2024)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಬೀದಿ ವ್ಯಾಪಾರಸ್ಥರು ಬೀದಿ ಪಾಲಾಗಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಗಜೇಂದ್ರಗಡ ತಾಲೂಕು ಸನಿತಿ, ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ, ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಶಾಮೀದ್ ಅಲಿಸಾಬ್ ದಿಂಡವಾಡ, ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆ ಹಾಗೂ ಕುಂದು ಕೊರತೆಗಳ ಪರಿಹಾರಕ್ಕಾಗಿ ಮತ್ತು ಹಕ್ಕೊತ್ತಾಯಿದರು. ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚೆ ನಡೆಸಿ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಇದೇ ವೇಳ ಸಂಘ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ್ ಮಾತನಾಡಿ, ಗಜೇಂದ್ರಗಡ ಎಲ್ಲಾ ರೀತಿಯ ವ್ಯಾಪಾರಿಗಳ ಅನುಕೂಲ ಇರುವ ಪಟ್ಟಣವಾಗಿದೆ. ಅಕ್ಕಪಕ್ಕದ ಹಳ್ಳಿಗಳ ಜನರು ಜೀವನೋಪಾಯಕ್ಕಾಗಿ ಪಟ್ಟಣವನ್ನು ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಬೀದಿ ವ್ಯಾಪಾರಸ್ಥರನ್ನ ಒಕ್ಕಲೆಬ್ಬಿಸಿದ್ದಾರೆ. ಮಾರುಕಟ್ಟೆ ಸ್ಥಳಾಂತರದಿಂದ ಅದೆಷ್ಟೋ ಬಡ ಕುಟುಂಬಗಳು ಬೀದಿಪಾಲಾಗಿದ್ದಾರೆ. ಸ್ಥಳಾಂತರ ಸಂಧರ್ಭದಲ್ಲಿ ಸುಳ್ಳು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ವ್ಯಾಪಾರಿಗಳ ತರಕಾರಿ ಹಣ್ಷುಗಳನ್ನ ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಕಸಿದುಕೊಂಡು ಹೋಗಿದ್ದಾರೆ. ಇದೆಲ್ಲ ಸಮಸ್ಯೆಗಳು ಪರಿಹಾರ ವಾಗಬೇಕಾದರೆ, ಶಾಶ್ವತ ಸ್ಥಳ ಅಗತ್ಯ ಎಂದರು. ಕಾನೂನನ್ನು ಗಾಳಿಗೆ ತೂರಿ ಸ್ಥಳಾಂತರ ಮಾಡಿದ್ದಾರೆ. ಈಗ 7 ದಿನಗಳೊಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗಯತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಗೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಮೀದ್ ಅಲಿಸಾಬ್ ದಿಂಡವಾಡ, ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ್, ಕಾರ್ಮಿಕರ ಮುಖಂಡರು ಬಾಲು ರಾಠೋಡ್, ವಕೀಲರು
ರೈತ ಮುಖಂಡರು ಎಂ ಎಸ್ ಹಡಪದ್, ಪದಾಧಿಕಾರಿಗಳಾದ ಚೌಡಮ್ಮ ಯಲು,
ಮೈಬೂಸಾಬ್ ಮಾಲ್ದಾರ್, ಮುತ್ತಣ್ಣ ರಾಠೋಡ್, ಅಂಬರೇಶ್ ಚವ್ಹಾಣ್, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ್, ವೀಷ್ಣು ಚಂದೂಕರ್, ಮಹಾಂತೇಶ್ ಹೀರೇಮಠ್, ಬಡಿಗೇರ್ ಪರಸುರಾಮ್ ಗಂಗಾಧರ ಸತ್ಯಣ್ಣವರ್, ಯಮನೂರಸಾಬ್ ಗಾದಿ, ಮರ್ತುಜಾ ದಿಂಡವಾಡ್, ಅಶೋಕ್ ಚವ್ಹಾಣ್,
ಕಳಕಪ್ಪ ಮಾಳೋತ್ತರ್, ಅಲ್ಲಾಬಕ್ಷಿ ಮುಚ್ಚಾಲಿ, ಸುರೇಶ್ ಅಕ್ಕಸಾಲಿ, ನಾಗರಾಜ್ ಆಜ್ಮ,ದೇವಕ್ಕೆ ರಾಠೋಡ, ಭದ್ರೇಶ್ ರಾಠೋಡ ದಾನಪ್ಪ ರಾಠೋಡ. ಮಂಜುನಾಥ ಚವ್ಹಾಣ. ನಾಗಪ್ಪ ಅಜ್ಮೀರ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.
Post a Comment