-->
Bookmark

Gajendragad : ಶಾಲಾ, ಕಾಲೇಜಿಗೆ ಭೇಟಿ ನೀಡಿದ ನಾಗರಾಜ್ ಹುಣಸಿಕಟ್ಟಿ

Gajendragad : ಶಾಲಾ, ಕಾಲೇಜಿಗೆ ಭೇಟಿ ನೀಡಿದ ನಾಗರಾಜ್ ಹುಣಸಿಕಟ್ಟಿ 
ಸಪೋರ್ಟ್ ನೀಡುವಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಮನವಿ 
ಗಜೇಂದ್ರಗಡ : (Dec_02_2024)

Zee ಕನ್ನಡದ ಸರಿಗಮಪದಲ್ಲಿ ಗಾಯಕ ನಾಗರಾಜ್ ಹುಣಸಿಕಟ್ಟಿ ಸೆಲೆಕ್ಟ್ ಆಗಿದ್ದಾರೆ. ಮುಂದಿನ ಹಂತಕ್ಕೆ ತೆರಳಲು ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ ಬೇಕಿದೆ. ಹೀಗಾಗಿ, ಡಿಸೆಂಬರ್ 2ರ ಸೋಮವಾರ ಗಜೇಂದ್ರಗಡ ಪಟ್ಟಣದ ಶಾಲಾ, ಕಾಲೇಜಿಗೆ ಬೇಟಿ ನೀಡಿದ್ದರು. ಈ ವೇಳೆ, ಡ್ಯಾನ್ಸರ್ ಮುಸ್ತಾಕ್ ಹುಟಗೂರ್, ಮತ್ತು ಹುಸೇನ್ ಹವಾಲ್ದಾರ್ ಸಾತ್ ನೀಡಿದ್ದರು. 

ಶಾಲಾ, ಕಾಲೇಜಿಗೆ ತೆರಳಿ, ಹಾಡನ್ನ ಹಾಡಿ ಸಪೋರ್ಟ್ ಮಾಡುವಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರು. 

ಯುವ ಪ್ರತಿಭೆ ನಾಗರಾಜ್ ಹುಣಸಿಕಟ್ಟಿ ಅವರು 2024-25ರ ಸರಿಗಮಪ ವೈಟ್ ಗೋಲ್ಡ್ ಕೊನೆಯ ಹಂತದಲ್ಲಿದ್ದಾರೆ. ನಾಗರಾಜ್ ಹುಣಸಿಕಟ್ಟಿ ಅವರು, ತಮ್ಮ ಗಾಯನವನ್ನು ಇಲ್ಲಿಯವರೆಗೂ ಪ್ರದರ್ಶಿಸುತ್ತಾ ಬಂದಿದ್ದಾರೆ.   ಸರಿಗಮಪ ವೈಟ್ ಗೋಲ್ಡ್  ಕೊನೆಯ ಹಂತದಲ್ಲಿದ್ದು ಅವರಿಗೆ ವೋಟಿಂಗ್ ಅಂದ್ರೆ  ಲೈಕ್ ಅವಶ್ಯಕತೆ ಇದೆ.  ಹೀಗಾಗಿ ಸಪೋರ್ಟ್  ಮಾಡುವಂತೆ ವೀಕ್ಷಕರಲ್ಲಿ ವಿನಂತಿಸಿದ್ದಾರೆ. 

ಇನ್ಸ್ಟಾಗ್ರಾಮ್ ಐಡಿ ಹೆಸರು official_King_Nagraj_ ಅಂತ ಇದೆ. ಅದಕ್ಕೆ ಹೋಗಿ ದಯವಿಟ್ಟು ಲೈಕ್ ಮಾಡಿ ಅಂತ ಕೇಳುತ್ತೇವೆ. ಇದೇ ಸಂದರ್ಭದಲ್ಲಿ ಮುಸ್ತಾಕ್ ಹುಟಗೂರ, ಹುಸೇನ್ ಹಾವಲ್ದಾರ, ನಾಗರಾಜ್ ಹುಣಸಿಕಟ್ಟಿ ಮತ್ತು ಪೃಥ್ವಿ ಗೊಂದಲೆ, ಉಪಸ್ಥಿತರಿದ್ದರು. 

ವರದಿ : ಮುಸ್ತಾಕ್ ಹುಟಗೂರ್
Post a Comment

Post a Comment