-->
Bookmark

Gajendragad : ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ

Gajendragad : ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ 
ಕಮಲ ಪಾಳಯದಲ್ಲಿ ಬಿರುಸಿನ ಚಟುವಟಿಕೆ 
ಒಂದು
ಗಜೇಂದ್ರಗಡ : (Dec_02_2024)

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಇನ್ನೇನು ಕೆಲವೆ ತಿಂಗಳುಗಳು ಬಾಕಿ ಇದೆ. ಹೀಗಾಗಿ ಕಮಲ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿವೆ. ಬಿಜೆಪಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದೆ. ಪಟ್ಟಣದ ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯಿಂದ ಸಂಘಟನಾ ಪರ್ವ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ 
ಮಾಜಿ ಸಚಿವರಾದ  ಕಳಕಪ್ಪ ಬಂಡಿ, ಪಕ್ಷದ ಆದೇಶದಂತೆ  ರೋಣ ಮತಕ್ಷೇತ್ರದಲ್ಲಿ  ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದರು‌. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಕಾರ್ಯಕರ್ತರಿಗೆ ಕೊರತೆ ಇಲ್ಲ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ‌ ಫಲಿತಾಂಶ ನೀಡಲು ಮತದಾರರು ಸಜ್ಜಾಗಿದ್ದಾರೆ. ಕಾರ್ಯಕರ್ತರಿಗೆ ಉತ್ಸಾಹ ತುಂಬಬೇಕಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು. 
ಇದೇ ವೇಳೆ, ಮಾತನಾಡಿದ  ರೋಣ ಮಂಡಳ ಅಧ್ಯಕ್ಷರಾದ  ಮುತ್ತಣ್ಣ ಕಡಗದ್, ಪ್ರತಿ ಬೂತ್ ನಲ್ಲಿ ನೂತನ ಭೂತ್ ಸಮಿತಿ ರಚನೆ ಮಾಡಿ ಪಕ್ಷವನ್ನು ಸಂಘಟಿಸಲಾಗುವುದು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಕೆ ಚವ್ಹಾಣ್, ರೋಣ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಮಲ್ಲಾಪುರ್, ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್ ಕೆ ಹಟ್ಟಿಮನಿ, ಪಕ್ಷದ ಮುಖಂಡರಾದ ಅಶೋಕ್ ನವಲಗುಂದ್, ಬಸನಗೌಡ ಪಾಟೀಲ್, ಶಶಿಧರ್ ಸಂಕನಗೌಡ, ಬಾಲಾಜಿ ಬೋಸ್ಲೆ, ರಮೇಶ್ ವಕ್ಕರ್, ಶರಣಪ್ಪ ಪ್ಯಾಟಿ, ಸಿದ್ದು ಯಾಳವಾಡ್, ಬಸವರಾಜ್ ಗಾಜಿ ಉಪಸ್ಥಿತರಿದ್ದರು.
Post a Comment

Post a Comment