ಗದಗ ಜಿಲ್ಲೆಯ ಗಜೇಂದ್ರಗಡದ ಚನ್ನಮ್ಮ ಸರ್ಕಲ್ ಬಳಿ ನೂತನವಾಗಿ ಗುಳಾಚಾ ಚಹಾ ಮಳಿಗೆ ಪ್ರಾರಂಭವಾಗಿದೆ. ಬೆಲ್ಲ ಆರೋಗ್ಯದಾಯಕವಾಗಿದ್ದು, ಗ್ರಾಹಕರಿಗೆ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಈ ಮಳಿಗೆ ಮಾಲಕರಾದ ರವಿಕುಮಾರ್ ಮಾಳೋತ್ತರ್ ಈ ಹಿಂದೆ ಅಲಂಕಾರ್ ಥಿಯೇಟರ್ ನಲ್ಲಿ ಚಹಾಮಾಡಿ ಅನುಭವ ಹೊಂದಿರುವ ಇವರು ಜನರ ನರ ನಾಡಿ ಅರಿತಿದ್ದಾರೆ. ನಾಲಿಗೆ ಚಪ್ಪರಿಸುವ ಹಾಗೆ ಚಹಾ ಮಾಡುವ ಇವರ ಕೈ ಚಳಕಕ್ಕೆ ಕುಟುಂಬ ಸಮೇತರಾಗಿ ಬರುತ್ತಾರೆ. ಇವರ ಜೊತೆಗೆ ರವಿಕುಮಾರ್ ಸಹೋದರ ರಾಘವೇಂದ್ರ ಮಾಳೋತ್ತರ್ ಸಹ ಸಾತ್ ನೀಡುತ್ತಾರೆ.
ಬೆಂಗಳೂರಿನಿಂದ ಬಂದ ಗ್ರಾಹಕರಾದ ಶ್ರೀನಾಥ್ ಕಮಲಾಪುರಕರ ಎಂಬ ದಂಪತಿಗಳು ಕುಟುಂಬದೊಂದಿಗೆ ಬಂದು ಚಹಾ ಸವಿದರು. ಚಹಾ ಸವಿದು, ಚಹಾ ಉತ್ತಮವಾಗಿದೆ. ಬೆಲ್ಲದ ಚಹಾ ಎಲ್ಲೆಡೆಯೂ ಇದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
Post a Comment