ಶುಕ್ರವಾರ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ೨ ಸಿನೇಮಾ ನೋಡಲು ಹೋದ ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಗೆ ಕಸದ ರಾಶಿ ಸ್ವಾತಿಸಿದವು ಎಂದು ಅಭಿಮಾನಿ ಮಂಜುನಾಥ್ ಹೇಳಿದ್ದಾರೆ.
ಸ್ವಚ್ಛತೆ ಕಾಣದ ಥಿಯೇಟರ್ ಗೆ ಅಭಿಮಾನಿಗಳು ಬರುವುದಾದರೂ ಹೇಗೆ ಎನ್ನುತ್ತಾರೆ ಮಹಿಳಾ ಅಭಿಮಾನಿ ಅಂಬುಜಾ ಪವಾರ್.
ಕುಟುಂಬದ ಸಮೇತರಾಗಿ ಬಂದವರು, ಮೂಗು ಮುಚ್ಚಿ, ಪ್ಲಾಸ್ಟಿಕ್, ಗಬ್ಬುನಾತದಲ್ಲೆ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕುಟುಂಬ ಸಮೇತಾರಗಿ ಟಾಕೀಸ್ ಗೆ ಬಂದು ಸೀನೆಮಾ ನೋಡಲಾಗದ ಪರಿಸ್ಥಿತಿ ಇದೆ. ಇದೆಲ್ಲದರ ನಡುವೆ ಅಭಿಮಾನಿಗಳು ಥಿಯೇಟರ್ ಗೆ ಬರುತ್ತಿಲ್ಲ ಎಂಬ ಆರೋಪಗಳು ಅಸಮಂಜವಾಗಿದೆ. ಕಸದ ತೊಟ್ಟಿಯಾಗಿದ್ದು, ಡಸ್ಟಬಿನ್ ಗಳಿಲ್ಲ. ಅಭಿಮಾನಿಗಳಿಗೆ ಪರ್ಯಾಯ ವ್ಯವಸ್ಥೆಗಳಿಲ್ಲ. ಇದೆಲ್ಲವನ್ನ ನೋಡಿಯೂ, ನೋಡದಂತೆ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಅಭಿಮಾನಿಗಳಿಗೆ ಎಂದು ಹೇಳಿದರು. ಎಲ್ಲ ನಟ, ನಟಿಯರ ಸಿನೇಮಾಗಳು ಬಂದ್ರು, ಗಜೇಂದ್ರಗಡದಲ್ಲಿ ಇದೇ ಪರಿಸ್ಥಿತಿ ಇರತ್ತೆ ಎನ್ನುತ್ತಾರೆ ಗ್ರಾಮೀಣ ಭಾಗದ ಅಭಿಮಾನಿಗಳು...
ಈ ಬಗ್ಗೆ ಮಾತನಾಡಿದ ಜಯ ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ್ ಜರ್ತಾರಿ, ಅಭಿಮಾನಿಗಳನ್ನ ಸೆಳೆಯಲು ಥಿಯೇಟರ್ ಗಳು ವಿಫಲವಾಗಿವೆ. ಇನ್ನಾದರೂ, ಸ್ಚಚ್ಛತೆ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಸಿನೇಮಾ ಥಿಯೇಟರ್ ನಲ್ಲೆ ನೋಡಬೇಕು ಎಂಬುದು ಎಲ್ಲ ಅಭಿಮಾನಿಗಳ ಆಶಯ ಹೌದು. ಆದ್ರೆ, ಅದಕ್ಕೆ ತಕ್ಕಂತೆ ಥಿಯೇಟರ್ ಗಳು ಸಹ ಸ್ವಚ್ಛತೆ ಕಾಪಾಡಿಕೊಂಡರೆ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಜೊತೆಗೆ ಥಿಯೇಟರ್ ಮಾಲೀಕರಿಗೆ ಆದಾಯವೂ ತರಲಿದೆ.
ವರದಿ : ಕೃಷ್ಣ ರಾಠೋಡ್
ಸಂಪಾದಕರು,
ಕಿರಾ ನ್ಯೂಸ್ ಕನ್ನಡ, ಗಜೇಂದ್ರಗಡ.
Post a Comment