-->
Bookmark

Gajendragad : ಮತ್ತೊಂದು ಚಿರತೆ ಕುರುಹು : ವದೆಗೋಳದಲ್ಲಿ ಬೋನು, ಅರಣ್ಯ ಇಲಾಖೆಯಿಂದ ಕುಂಟೋಜಿ ವ್ಯಾಪ್ತಿಯಲ್ಲಿ ಶೋಧ

Gajendragad : ಮತ್ತೊಂದು ಚಿರತೆ ಕುರುಹು : ವದೆಗೋಳದಲ್ಲಿ ಬೋನು, ಅರಣ್ಯ ಇಲಾಖೆಯಿಂದ ಕುಂಟೋಜಿ ವ್ಯಾಪ್ತಿಯಲ್ಲಿ ಶೋಧ 
ಗಜೇಂದ್ರಗಡ : (Dec_06_2924)
ಮೊನ್ನೆ ಮೊನ್ನೆ ಅಂದ್ರೆ, ಇತ್ತೀಚೆಗೆ ವದೆಗೋಳದಲ್ಲಿ ಚಿರತೆ ಸೆರೆ ಸಿಕ್ಕಿತ್ತು‌. ಮತ್ತೆ ಚಿರತೆಗಳಿವೆ ಎಂದು ರೈತರು ಹೇಳಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನು ಇಟ್ಟಿದ್ದಾರೆ. ರೈತರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸಾತ್ ನೀಡುತ್ತಿದ್ದು, ಆತಂಕ ಪಡಬೇಡಿ ಎಂದು ಹೇಳಿದ್ದಾರೆ ಉಪ ಅರಣ್ಯಾಧಿಕಾರಿ ಪ್ರವೀಣಕುನಾರ್ ಸಾಸಿವೆಹಳ್ಳಿ. 
ವದೆಗೋಳದಲ್ಲಿ ಚಿರತೆ ಸೆರೆ ಸಿಕ್ಕ ಜಾಗದಿಂದ ಕೂಗಳತೆ ದೂರದಲ್ಲೆ ಮತ್ತೊಂದು ಬೋನು ಇಟ್ಟಿದ್ದಾರೆ ಎಂದು ವೀರೇಶ್ ಮಾಳೂತ್ತರ್, ಸೋಮಪ್ಪ ರಾಥೋಡ್, ವೆಂಕಟೇಶ್ ರಾಠೋಡ್, ಈರಪ್ಪ ರಾಥೋಡ್, ಶಶಿಕುಮಾರ್ ಮಾಳೂತ್ತರ್, ಬಸವರಾಜ್ ಕುರಿ, ರಾಮನ್ ಗೌಡ್ರು, ಗಣೇಶ್ ರಾಠೋಡ್ ಸೇರಿದಂತೆ ಸುತ್ತಮುತ್ತಲ ರೈತರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಆಮೀನಸಾಬ್ ಬಳೂಟಗಿ ಅವರ ತಂಡ ಕುಂಟೋಜಿಯ ಅಯ್ಯನಕೊಳ್ಳದಲ್ಲಿ ಶುಕ್ರವಾರ 
ಗಸ್ತು ತಿರುಗಿದ್ದಾರೆ. 
Post a Comment

Post a Comment