ಗಜೇಂದ್ರಗಡ : (Nov_02_2024)
ರೈತರು ಆತಂಕ ಪಡುವ ಅಗತ್ಯ ವಿಲ್ಲ ಅರಣ್ಯ ಇಲಾಖೆಗೆ ಬೋನು ಇಡುವಂತೆ ಸೂಚನೆ ನೀಡಿದ್ದೇವೆ ಎಂದು ಗಜೇಂದ್ರಗಡ ಪಿಎಸ್ಐ ಸೋಮನಗೌಡ ಬಿ ಗೌಡ್ರ ಹೇಳಿದರು. ಗಂಗಾನಗರದ ಚಿರತೆ ಕಾಣಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಡಿಸೆಂಬರ್ ಒಂದ ರಂದು ರಾತ್ರಿ ಸ್ಥಳಕ್ಕೆ ಆಗಮಿಸಿದ್ದರು. ಮುಂಜಾನೆ ಸಹ ಸ್ಥಳಕ್ಕೆ ಭೇಟಿ ನೀಡಿ, ರೈತರು ಆತಂಕ ಪಡಬೇಡಿ, ಅರಣ್ಯ ಇಲಾಖೆಯೊಂದಿಗೆ ಸತತ ಸಂಪರ್ಕ ಹೊಂದಿದ್ದೇವೆ. ಚಿರತೆ ಹಿಡಿಯಲು ಬೋನು ಇಡುವಂತೆ ಸೂಚಿಸಿದ್ದೇವೆ. ಹೀಗಾಗಿ, ರೈತರು ಆತಂಕ ಒಡುವ ಅಗತ್ಯ ವಿಲ್ಲ ಎಂದು ತಿಳಿಸಿದರು.
ರಾತ್ರಿ ಯಲ್ಲಪ್ಪ ಇಟಗಿ ಅವರ ನಾಯಿಯನ್ನ ಹೊತ್ತೊಯ್ತಿದೆ. ಹೀಗಾಗಿ, ಚಿರತೆ ಮೂವ್ಮೆಂಟ್ ಇದೆ. ರಾತ್ರಿ ಹೊತ್ತು ನೀರು ಕುಡಿಯಲು ಬಂದಿರಬಹುದು. ಯಾಕೆ ಅಂದ್ರೆ, ಹೊಲಗಳಲ್ಲಿ ನೀರಿನ ತೊಟ್ಟಿಗಳಿವೆ. ರೈತರು ಜಾಗರೂಕರಾಗಿರಿ ಎಂದು ಪಿಎಸ್ಐ ರೈತರಲ್ಲಿ ಮನವಿ ಮಾಡಿದರು.
ಇನ್ನೂ, ರಾತ್ರಿ ಚಿರತೆ ಕಾಣಿಸಿಕೊಂಡಿದ್ದು ಆತಂಕದಲ್ಲಿದ್ದೇವೆ. ರಾತ್ರಿಯಿಡಿ ಜೀವ ಭಯದಲ್ಲೆ ಕಾಲ ಕಳೆಯುವಂತಾಗಿದೆ. ಜಾನುವಾರುಗಳ ರಕ್ಷಣೆ ಒಂದೆಡೆಯಾದ್ರೆ, ಮತ್ತೊಂದೆಡೆ, ಹೊಲಗಳಲ್ಲಿ ಹಾಕಿರುವ ಶೆಂಗಾ ಸೇರಿದಂತೆ ಇತರೆ ಬೆಳೆಗಳಿಗೆ ನೀರು ಹಾಯಿಸಲು ಹೋಗಲು ಭಯವಾಗುತ್ತಿದೆ. ಪ್ರತಿಯೊಂದು ಹೊಲದಲ್ಲೂ ಮನೆಗಳಿವೆ ಎಂದು ರೈತ ಯಲ್ಲಪ್ಪ ಇಟಗಿ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ್, ಗಸ್ತು ಅರಣ್ಯ ಪಾಲಕ ಆಮೀನಸಾಬ್ ಬಳೂಟಗಿ ರೈತರು ಆತಂಕ ಪಡುವ ಅಗತ್ಯ ವಿಲ್ಲ. ಮೇಲಧಿಕಾರಿಗಳಿಗೆ ವಿಷಯ ತಿಳಿಸುತ್ತೇವೆ. ಬೋನು ಇಡಲು ಸಿದ್ಧತೆ ಮಾಡುತ್ತೇವೆ ಎಂದು ಕಿರಾ ನ್ಯೂಸ್ ಕನ್ನಡಕ್ಕೆ ತಿಳಿಸಿದರು.
Post a Comment