ಗಜೇಂದ್ರಗಡ : (Dec_04_2024)
ಕಾಲಕಾಲೇಶ್ವರ, ವದೇಗೋಳ, ಕುಂಟೋಜಿ, ಜಿಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಗೆ ತಲೆನೋವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಗಜೇಂದ್ರಗಡ ಗಂಗಾನಗರದಲ್ಲಿ ಚಿರತೆ ನಾಯಿಯನ್ನ ಹೊತ್ತೊಯ್ದಿತ್ತು. ವದೆಗೋಳದಲ್ಲಿ ಹಲವು ನಾಯಿ, ಕುರಿಗಳು ಬಲಿಯಾಗಿದ್ವು. ಅರಣ್ಯ ಇಲಾಖೆಗೆ ಕಳೆದ ಒಂದು ವರ್ಷದಿಂದ ತಲೆನೋವಾಗಿ ಪರಿಣಮಿಸಿತ್ತು. ರೈತರಿಗೆ ಆತಂಕವೂ ಆಗಿತ್ತು. ರೈತರು ತಮ್ಮ ತಮ್ಮ ಜಮೀನುಗಳಿಗೆ ನೀರುಣಿಸಲು ಹೆದರುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು, ಬೋನು ಇಟ್ಟಿದ್ದರು. ಎರಡು ಚಿರತೆಗಳಿವೆ ಎಂದು ರೈತರು ಹೇಳಿದ್ದು, ಒಂದು ಚಿರತೆ ಬೋನಿಗೆ ಬಿದ್ದಿದೆ. ಆತಂಕದಲ್ಲಿದ್ದ ರೈತರು ನಿರಾಳರಾಗಿದ್ದಾರೆ. ಮತ್ತೊಂದು ಚಿರತೆಯನ್ನೂ ಸಹ ಸೆರೆಹಿಡಿಯ ಬೇಕಿದೆ ಎನ್ನುತ್ತಾರೆ ರೈತರು.
Post a Comment