ಅನ್ನಪೂರ್ಣ ರಾಠೋಡ್ (54 ವರ್ಷ ) ಶಿಕ್ಷಕಿಯನ್ನ ಅಪರಿಚಿತರು ಕೊಲೆಮಾಡಿದ್ದಾರೆ ಎಂದು ಆರೋಪಿಸಿ, ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೊಟ್ಟಿ ಮಾಡುವ ಕೊಣಗಿಯಿಂದ ತಲೆಗೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ ಎಂದು ಅನ್ನಪೂರ್ಣ ಅವರ ಸಹೋದರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದೆ ಡಿಸೆಂಬರ್ 19 ರಾತ್ರಿ 10 ಗಂಟೆಯಿಂದ ಡಿಸೆಂಬರ್ 21ರ ಮುಂಜಾನೆ 7 ಗಂಟೆ ಸಮಯದಲ್ಲಿ ಕೊಲೆ ನಡೆದಿದೆ ಎಂದು ರಮೇಶ್ ರಾಠೋಡ್ ದೂರಿನಲ್ಲಿ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
Gajendragad : ಶಿಕ್ಷಕಿ ಕೊಲೆ : ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲು
Team KIRA
... menit baca
Dengarkan
Post a Comment