-->
Bookmark

Gajendragad : ಶಿಕ್ಷಕಿ ಅನ್ನಪೂರ್ಣ ಸಂಶಯಾಸ್ಪದ ಸಾವು : ಕೊಲೆ ಶಂಕೆ

Gajendragad : ಶಿಕ್ಷಕಿ ಅನ್ನಪೂರ್ಣ ಸಂಶಯಾಸ್ಪದ ಸಾವು : ಕೊಲೆ ಶಂಕೆ
ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ಬೇಟಿ : ಪೊಲೀಸ್ ಇಲಾಖೆ ಮಾಹಿತಿ 

ಗಜೇಂದ್ರಗಡ : (Dec_21_2024)
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಮೂಲದ ಅನ್ನಪೂರ್ಣ ರಾಠೋಡ್ ಅವರು ಮೃತ ಪಟ್ಟಿದ್ದಾರೆ. ಶಿಕ್ಷಕ ವೃತ್ತಿ ಮಾಡುತ್ತಿದ್ದ ಅವರು ಬಿಇಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಗಜೇಂದ್ರಗಡದ ನವನಗರದ ಸ್ವಂತ ಮನೆಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. 

ಅನ್ನಪೂರ್ಣ ಅವರಿಗೆ ಇ‌ಬ್ಬರು ಗಂಡು ಮಕ್ಕಳಿದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 21 ರಂದು ಬೆಳಗ್ಗೆ ಯಾವುದೋ ಕಾರಣಕ್ಕೆ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ಎಸ್.ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಬೆರಳಚ್ಚು ತಜ್ಞರು, ಡಾಗ್ ಸ್ಕ್ವಾಡ್ ಸ್ಥಳಕ್ಕಾಗಮಿಸಲಿದೆ. ತನಿಖೆ ಚುರುಕು ಗೊಳ್ಳುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳಿಂದ ಪೊಲೀಸರು ಸನ್ನದ್ಧರಾಗಿದ್ದಾರೆ. 

ಬೆಳ್ಳಂ‌ಬೆಳಗ್ಗೆ ಘಟನೆ ನಡೆದಿದ್ದು,  ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
Post a Comment

Post a Comment