ಗಜೇಂದ್ರಗಡ : (Dec_17_2024)
ಗಜೇಂದ್ರಗಡದಲ್ಲಿ ಅತ್ತೆ ಸೊಸೆಯಂದಿರು ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಬೋರ್ವೆಲ್ ಕೊರಿಸಿದ ವಿಚಾರವನ್ನು ಮುಖ್ಯಮಂತ್ರಿಗಳಾದಿಯಾಗಿ, ಕಾಂಗ್ರೆಸ್ ಪಕ್ಷದ ಮುಖಂಡರು ರಾಜ್ಯಾದ್ಯಂತ ದೊಡ್ಡ ಸಾಧನೆ ಎಂಬಂತೆ ವಿಷಯವನ್ನು ಮಾತನಾಡುತ್ತಿದ್ದಾರೆ. ಆದ್ರೆ, ಈ ಹಿಂದೆ ಅಕ್ರಮ ಸಕ್ರಮ ಯೋಜನೆಯಲ್ಲಿ 15 ರಿಂದ 20 ಸಾವಿರ ಕಟ್ಟಿದರೆ ವಿದ್ಯುತ್ ಸಂಪರ್ಕವನ್ನು ಕೆಇಬಿ ಅವರೇ ಬಂದು ಮಾಡಿ ಹೋಗುತ್ತಿದ್ರು. ಈಗ, ರೈತರು ವಿದ್ಯುತ್ ಗುತ್ತಿಗೆದಾರರನ್ನು ಹಿಡಿದು ತಾವೇ ಟಿಸಿಯನ್ನು ತಂದು, ವಿದ್ಯುತ್ ಸಂಪರ್ಕವನ್ನು ಪಡೆಯಬೇಕೆಂದರೆ, ಎರಡರಿಂದ, ಎರಡುವರೆ ಲಕ್ಷ ರೂಪಾಯಿ ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಮುಖಾಂತರ 35, 40 ಸಾವಿರ ರೂಪಾಯಿ ಕೊಟ್ಟು, ರೈತರಿಂದ ಎರಡು, ಎರಡುವರೆ ಲಕ್ಷ ರೂಪಾಯಿ ಕಿತ್ತುಕೊಳ್ಳುತ್ತಿರುವುದು ಯಾವ ನ್ಯಾಯ? ಎಡಗೈಯಲ್ಲಿ ಕೊಟ್ಟ ಹಾಗೆ ಮಾಡಿ, ಬಲಗೈಯಲ್ಲಿ ಕಿತ್ತುಕೊಳ್ಳುವ ಸರ್ಕಾರಕ್ಕೆ ಜನರು ಮುಂದಿನ ದಿನಮಾನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ. ವಿದ್ಯುತ್ ಫ್ರೀ ಅಂತ ಹೇಳಿ, ಕಮರ್ಷಿಯಲ್ ವಿದ್ಯುತ್ ದರ ಹೆಚ್ಚಳ ಮಾಡಿದಿರಿ ಎಂದು ಬಿಜೆಪಿ ಮುಖಂಡ ಮುತ್ತಣ್ಣ ಕಡಗದ ಹೇಳಿದರು.
ಪಹಣಿ ದರ, ಬಾಂಡ ದರ ಹೆಚ್ಚಳ ಮಾಡಿ ಸಾಮಾನ್ಯ ಜನರ ಮೇಲೆ ಹೊರೆ ಹಾಕಿದೆ ಈ ಸರ್ಕಾರ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳ ನೆಪ ಹೇಳಿ, ಅಭಿವೃದ್ಧಿ ಮರೀಚಿಕೆ ಯಾಗಿದೆ. ಮಾಡಬೇಕಾದ ಕೆಲಸ ಸಾಕಷ್ಟು ಇವೆ. ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಿ ಎಂದು ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಹೇಳಿದರು.
Post a Comment