ಲೋಕ ಕಲ್ಯಾಣಕ್ಕಾಗಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ನಗರದಲ್ಲಿ ನೆಲೆಸಿರುವ ತಾಯಿ ದುರ್ಗಾದೇವಿಗೆ ಚಂಡಿಕಾ ಹೋಮ ಮಾಡಲಾಯ್ತು. ಬಂಜಾರ ಸಮುದಾಯದ ಮುಖಂಡರಾದ ಪ್ರಶಾಂತ್ ರಾಠೋಡ್, ಬದ್ಯಾ ನಾಯ್ಕ್ ತುಕಾ ನಾಯ್ಕ್ ಅವರ ಸಹಯೋಗದಲ್ಲಿ ಪೂಜೆ ನಡೆಯಿತು.
ಹಿಮಾಚಲ ಪ್ರದೇಶದ ಶಿಮ್ಲಾದ ಮಧುಬನದಿಂದ ಆಗಮಿಸಿದ ಶ್ರೀ ಶ್ರೀ ಪ್ರಕಾಶ್ ಸ್ವಾಮಿಜಿ ಅವರಿಂದ ಪೂಜೆಗಳು ಜರುಗಿದ್ವು. ಸಹ ಅರ್ಚಕರಾದ ಓಂಕಾರ್ ಕಾಟ್ವಾ, ಲುಕ್ಕಣ್ಣ ಮೆರ್ವಾಡೆ, ಸ್ವಾಮಿಜಿಗಳ ಜೊತೆಗಿದ್ದರು.
ಡಿಸೆಂಬರ್ 7 ರ ಶನಿವಾರ ಬೆಳ್ಳಂಬೆಳಗ್ಗೆ 8 ರಿಂದ ಮಧ್ಯಾಹ್ನ 3 ವರೆಗೂ ಪೂಜಾ ಕೈಂಕರ್ಯ ನಡೆಯಿತು. ಈ ವೇಳೆ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯ್ತು. ಅಲ್ಲದೇ, ಎಲ್ಲೆಡೆ ಪ್ರಕೃತಿ ವಿಮೋಪಗಳು ಜರುಗುತ್ತಿದ್ದು, ಜಗತ್ತನ್ನ ರಕ್ಷಿಸಬೇಕಿದೆ. ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ನಡೆಸಿದ್ದೇವೆ ಎಂದು ಬಂಜಾರ ಸಮುದಾಯದ ಮುಖಂಡರಾದ ಪ್ರಶಾಂತ್ ರಾಠೋಡ್ ಹೇಳಿದರು.
ಸೇವಾಲಾಲ್ ನಗರದ ದುರ್ಗಾದೇವಿ ಅರ್ಚಕರಾದ
ದೇವಲಪ್ಪ ತುಕಾನಾಯಕ್ ರಾಠೋಡ್, ಶ್ರೀ ಕೃಷ್ಣ ದೇವರ ಅರ್ಚಕರಾದ ತಿಪ್ಪಣ್ಣ ಚವ್ಹಾಣ್, ಸಪ್ತ ಮಾತೆಯರ ಅರ್ಚಕರಾದ ದುರಗಪ್ಪ ಮಾಳೋತ್ತರ್,
ಸಂತ ಸೇವಾಲಾಲ್ ಮಹಾರಾಜರ ಅರ್ಚಕರಾದ ಶೇಕಪ್ಪ ರಾಠೋಡ್, ಸಮಾಜದ ಮುಖಂಡರಾದ ಲಾಲಪ್ಪ ರಾಠೋಡ್, ಶಂಕ್ರಪ್ಪ ರಾಠೋಡ್, ಬೆಳಗಾವಿ ಜಿಲ್ಲೆಯ ನಾನು ಸಾದ್ ಅವರ ಅರ್ಚಕರಾದ ಸೋಮಾ ಸಾದ್ ಸಹ ಭಾಗವಹಿಸಿದ್ದರು. ಶಂಕ್ರಪ್ಪ ಹಾಬ್ಶಪ್ಪ ಮಾಳೋತ್ತರ್, ತಾರಾಸಿಂಗ್ ರಾಠೋಡ್, ಪರಶುರಾಮ ಗುಗಲೋತ್ತರ್, ಪುರಸಭೆ ಸದಸ್ಯರಾದ ರುಪ್ಲೆಪ್ಪ ರಾಠೋಡ್, ನೂರಪ್ಪ ರಾಠೋಡ್, ರಾಮಚಂದ್ರಪ್ಪ ಮಾಳೋತ್ತರ್, ಗಣೇಶಪ್ಪ ಮಾಳೋತ್ತರ್, ಶಿವಪ್ಪ ಪಮ್ಮಾರ್, ಯಮನಾ ನಾಯ್ಕ್ , ಮನ್ಯಾ ನಾಯ್ಕ್, ಸುರೇಶ್ ನಾಯ್ಕ್, ಕಾರಭಾರಿಗಳಾದ ಮಂಜು ಮಾಳೋತ್ತರ್, ಗೋವಿಂದಪ್ಪ ಗುಗಲೋತ್ತರ್, ದುರಗಪ್ಪ ಮಾಳೋತ್ತರ್, ವಿಠ್ಠಲ ರಾಠೋಡ್, ವಿನಾಯಕ್ ರಾಠೋಡ್, ಭಜನಾ ಸಂಘದ ಅಧ್ಯಕ್ಷರಾದ ಧನ್ನು ರಾಠೋಡ್ ಸೇರಿದಂತೆ ಸಮಾಜದ ಮುಖಂಡರು ಲೋಕ ಕಲ್ಯಾಣದ ಪೂಜೆಗೆ ಸಾಕ್ಷಿಯಾದ್ರು.
Post a Comment