-->
Bookmark

Gajendragad : Zee ಕನ್ನಡದಲ್ಲಿ ಗ್ರಾಮೀಣ ಪ್ರತಿಭೆ ನಾಗರಾಜ್

Gajendragad : Zee ಕನ್ನಡದಲ್ಲಿ ಗ್ರಾಮೀಣ ಪ್ರತಿಭೆ ನಾಗರಾಜ್ 
ರಾಜ್ಯದ ಜನರ ಆಶೀರ್ವಾದ ಸಿಗಲಿ ಹೊಸ ಪ್ರತಿಭೆಗೆ 
ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು 

ಗಜೇಂದ್ರಗಡ : (Dec_01_2024)
ಗದಗ ಜಿಲ್ಲೆಯ‌ ಗಜೇಂದ್ರಗಡ ಪಟ್ಟಣದ ಅದ್ಬುತ ಪ್ರತಿಭೆ ನಾಗರಾಜ್ ಹುಣಸಿಕಟ್ಟಿ. ಬಡತನದಲ್ಲಿ ಹುಟ್ಟಿದ ಗ್ರಾಮೀಣ ಸೊಗಡಿನ ಪ್ರತಿಭೆ ಕೂಡ ಹೌದು. 
ಶ್ರೀ ಆಂಜನೇಯ ಭಜನಾ‌ ಮಂಡಳಿಯ ಸದಸ್ಯರಾಗಿರುವ ಇವರು, ಪ್ರತಿದಿನ practice ಮಾಡ್ತಾರೆ. ಪ್ರತಿ ಶನಿವಾರ ಶ್ರೀ ಆಂಜನೇಯ ಭಜನಾ ಮಂಡಳಿ ಸದಸ್ಯರೊಂದಿಗೂ ನಿರಂತರn ಹಾಡುಗಳನ್ನ ಹಾಡುತ್ತಾರೆ. ಇನ್ನೂ, ತಿರುಪತಿ ತಿರುಮಲನ ಸನ್ನಿಧಿಯಲ್ಲೂ ಹಾಡಿರುವ ಇವರು, ಮಂತ್ರಾಲಯದ ರಾಯರ ಸನ್ನಿಧಿಯಲ್ಲೂ ಗುರುತಿಸಿಕೊಂಡಿದ್ದಾರೆ. ಸರಿಗಮಪದಲ್ಲಿ ಹಾಡಿದ ಮತ್ತೊಂದು ಪ್ರತಿಭೆ ಅಂದ್ರೆ, ಅದು ಶ್ರೀರಾಮ್ ಕಾಸರ್ ಅವರು. ಅವರೊಂದಿಗೂ ಹಾಡುಗಳನ್ನ ಹಾಡಿದ್ದಾರೆ. ಶ್ರೀ ರಾಮ್ ಕಾಸರ್ ಗಜೇಂದ್ರಗಡದ ಕೀರ್ತಿಯನ್ನ ಗಾಯನ ಜಗತ್ತಿಗೆ ಹೊಸ ರೂಪ ಕೊಟ್ಟವರು. ಅವರ ಹಾದಿಯಲ್ಲೇ, ನಾಗರಾಜ್ ಹುಣಸಿಕಟ್ಟಿ ಸಾಗುತ್ತಿದ್ದಾರೆ. 

ನಾಗರಾಜ್ ಹುಣಸಿಕಟ್ಟಿ ಅವರು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ... ಗಜೇಂದ್ರಗಡದ ಕೀರ್ತಿ ಮುಗಿಲೆತ್ತರಕ್ಕೆ ಹಾರಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.‌ ಗಂಡು ಮೆಟ್ಟಿದ ಮಣ್ಣಿನಿಂದ ಬೆಂಗಳೂರಿಗೆ ಅದೃಷ್ಟ ಪರೀಕ್ಷೆಗೆ ಹೋಗಿರುವ ಇವರಿಗೆ ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಕೋಟ್ಯಾಂತರ ಜನರ ಆಶೀರ್ವಾದ ಸಿಗಲಿ ಎಂದು ಕೃಷ್ಣ ರಾಠೋಡ್ ಮತ್ತು ಕಿರಾ ನ್ಯೂಸ್ ಕನ್ನಡ ಬಳಗದಿಂದ ಶುಭ ಹಾರೈಕೆ...
Post a Comment

Post a Comment