ಗಜೇಂದ್ರಗಡ : (Dec_02_2024)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡಯುತ್ತಿರುವ ಬಸವ ಪುರಾಣ ಸದ್ಭಾವನಾ ಪಾದಯಾತ್ರೆಯೂ 13,14,16 ನೇ ವಾರ್ಡ್ ನಿಂದ ಸಾಗಿತು. ಪಾದಯಾತ್ರೆಯ ನೇತೃತ್ವವನ್ನ ಹಾಲಕೆರೆ ಮಠದ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದಾರೆ. ಶ್ರೀ ಮಠದ ಮತ್ತು ಮಹಾಸ್ವಾಮಿಗಳಿಗೆ ಪಟ್ಟಣದೆಲ್ಲೆಡೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಬಸವ ಪುರಾಣದಿಂದ ಪಟ್ಟಣದಲ್ಲಿ ಸಾಮರಸ್ಯ ಸಾರುತ್ತಿರುವ ಶ್ರೀಗಳಿಗೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ಅವರು ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಎಂದೆಂದಿಗೂ ಭಾತೃತ್ವ ಸಾರುವ ಕೆಸಲ ಮಾಡುತ್ತಾ ಬಂದಿದೆ. ಅದಕ್ಕೆ ಮತ್ತೊಂದು ಮೈಲಿಗಲ್ಲನ್ನ ಶ್ರೀ ಬಸವ ಪುರಾಣ ಮಾಡುತ್ತಿದೆ.
ಎಂಟನೆ ದಿನದ ಪಾದಯಾತ್ರೆಯಲ್ಲಿ ಸಿದ್ದಪ್ಪ ಬಂಡಿ, ಮುರ್ತುಜಾ ಡಾಲಾಯತ್, ಬಸವರಾಜ್ ಚನ್ನಿ, ಸಂಗಪ್ಪ ಕುಂಬಾರ್, ಪ್ರಭು ಚವಡಿ, ಎ ಪಿ ಗಾಣಗೇರ್, ಶೇಖಣ್ಣ ಇಟಗಿ, ಬಾಬು ಕೇಸರಿ, ಮಂಜುನಾಥ್ ಚನ್ನಿ, ರವಿ ಹಾಸಿಗಲ್, ಕಳಕೇಶ್ ಚನ್ನಿ, ಶಿವಯ್ಯ ಚಕ್ಕಡಿಮಠ, ಸುರೇಂದ್ರಸಾ ರಾಯಬಾಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment