ಧಾರವಾಡ : (Dec_22_2924)
ಬಾಬಾ ಸಿನಿ ಕ್ರಿಯೇಷನ್ಸ್ ರವರ ಕರ್ನಾಟಕ ಸರಕಾರದ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಅಕ್ಷರತಾಯಿ, ದತ್ತಿದಾನಿ ಎಂದೇ ಹೆಸರುವಾಸಿಯಾದ ಶ್ರೀಮತಿ ಲೂಸಿ ಕೆ ಸಾಲ್ಡಾನಾ ಅವರ ಜೀವನ ಕುರಿತಾದ ‘ಬದುಕು ಬಂಡಿ’ ಚಲನಚಿತ್ರ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನೆರವೇರಿತು.
ಶ್ರೀಮತಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ, ನವರಸ ಸ್ನೇಹಿತರ ವೇದಿಕೆ(ರಿ) ಧಾರವಾಡ ಇವರ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರದೊಂದಿಗೆ ಭಾವೈಕ್ಯತೆ ಸಾರುವ ರೀತಿಯಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ ಗುರುಗಳ ಸಾನಿಧ್ಯದಲ್ಲಿ ಶಂಕರ ಹಲಗ್ತತಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ತಮ್ಮ ದುಡಿತದ ಹಣವನ್ನು ಶಿಕ್ಷಣ ರಂಗಕ್ಕೆ ದಾನವಾಗಿ ನೀಡುತ್ತಿರುವ ಲೂಸಿ ಸಾಲ್ಡಾನ ಅವರ ಕಾರ್ಯ ಶ್ಲಾಘನೀಯ ಎಂದರು. ‘ಬದುಕು ಬಂಡಿ’ ಚಲನಚಿತ್ರ ಬಿಡುಗಡೆ ಮಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನ ಅವರು ೧೧೨ ಸರಕಾರಿ ಶಾಲೆಗಳಿಗೆ ೮೦ ಲಕ್ಷ ದತ್ತಿ ನೀಡಿದ್ದು ಇದು ಶಿಕ್ಷಣದ ಬಗೆಗಿನ ಅವರ ಕಾಳಜಿ ತೋರುತ್ತದೆ ಎಂದರು. ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ರವರ ಸಂಪಾದಿತ ಕೃತಿಯಾಧರಿಸಿ ನಿರ್ಮಿಸಲಾದ ಚಿತ್ರವನ್ನು ಧಾರವಾಡ, ಹೊನ್ನಾಪೂರ, ಅರವಟಗಿ, ಅಂಬೊಳ್ಳಿ, ಇನಾಮ ಹೊಂಗಲ್, ಹೆಬ್ಬಳ್ಳಿ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ, ಚಿತ್ರದಲ್ಲಿ ಎರಡು ಹಾಡುಗಳಿವೆ ಎಂದು ಸಹನಿರ್ದೇಶಕ ಎನ್.ಬಿ.ದ್ಯಾಪೂರ ತಿಳಿಸಿದರು. ರಜಾದಿನಗಳಲ್ಲಿ ತಮ್ಮ ಎಲ್ಲ ವಯುಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ೫೦ಕ್ಕೂ ಮಿಕ್ಕಿ ಶಿಕ್ಷಕರು ಇಲಾಖೆಗಳವರ ಸಹಕಾರದೊಂದಿಗೆ ಸರಕಾರಿ ಶಾಲೆಯಲ್ಲೇ ಓದುತ್ತಿರುವ ೫೦ಕ್ಕೂ ಮಿಕ್ಕಿ ಮಕ್ಕಳನ್ನು ಚಿತ್ರದಲ್ಲಿ ಅಭಿನಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಚಿತ್ರತಂಡದವರು ಮಕ್ಕಳ ಪ್ರತಿಭೆಯನ್ನೂ ಬೆಳಕಿಗೆ ತಂದಿರುವುದು ವಿಶೇಷ ಎಂದು ನಿರ್ದೇಶಕ ಬಾಬಾಜಾನ ಮುಲ್ಲಾ ಹೇಳಿದರು.
ಪಾತ್ರವರ್ಗದಲ್ಲಿ ಫಾದರ್ ಡಾ|| ಮೈಕೆಲ್ ಸೋಜ್, ಶ್ರೀಮತಿ ಲೂಸಿ.ಕೆ.ಸಾಲ್ಡಾನ್, ಶ್ರೀಮತಿ ಪ್ರಮೀಳಾ ಜಕ್ಕಣ್ಣವರ, ಜೆ.ಎಮ್.ಗಾಮನಗಟ್ಟಿ, ರಾಜೀವಸಿಂಗ್ ಹಲವಾಯಿ, ಲಕ್ಷ್ಮೀ.ಎಸ್.ಬಿ, ಶಾರುಕ್ ಮುಲ್ಲಾ, ಶಶಿಕುಮಾರ ಪತಂಗೆ, ಹುಸೇನ್ ಶ್ಯಾನವಾಡ, ಮಹಾಂತೇಶ ಹುಬ್ಬಳ್ಳಿ, ಮಹೇಶ್ವರಿ ಡಿ.ಯು, ದಿವ್ಯಾ ಶಾಂಬೇಕರ, ಮೌನೇಶ್ವರಿ ದ್ಯಾಪೂರ, ಚಂದ್ರವ್ವ ಹರತಕ್ಕಡಿ, ಐಶ್ವರ್ಯ ಬಿರಾದಾರ, ಎಲ್.ಐ.ಲಕ್ಕಮ್ಮನವರ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಛಾಯಾಗ್ರಹಣ ಮಹ್ಮದಯುಸೂಫ್ ಮುಲ್ಲಾ , ಗೀತ ಸಾಹಿತ್ಯ ಮಹಾದೇವ ಬಸರಕೋಡ, ಧ್ವನಿಮುದ್ರಣ ಮತ್ತು ಹಿನ್ನೆಲೆ ಸಂಗೀತ ವೈಭವಭಟ್, ರಕ್ಷಿತಾ ಭಟ್, ನೃತ್ಯ ಸಂಯೋಜನೆ ಮಲ್ಲನಗೌಡ ಪಾಟೀಲ, ಎಡಿಟಿಂಗ್ ,ಡಿಐ, ಪವನ ಕುಲಕರ್ಣಿ ,ಹಿನ್ನೆಲೆ ಧ್ವನಿ ಆರತಿ ದೇವಶಿಕಾಮಣಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ಸಹನಿರ್ದೇಶನ ಎನ್.ಬಿ.ದ್ಯಾಪೂರ ,ಚಿತ್ರಕಥೆ-ಸಂಭಾಷಣೆ- ನಿರ್ದೇಶನ ಬಾಬಾಜಾನ ಮುಲ್ಲಾ ಅವರದಿದೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Post a Comment