ಮುಳಗುಂದ :(Nov_28_2024)
ಕನ್ನಡ ವಚನ ಸಾಹಿತ್ಯ, ಹಳಗನ್ನಡ ಸಾಹಿತ್ಯ, ಶಬ್ದಮಣಿದರ್ಪಣ ಮತ್ತು ಕನ್ನಡ ಛಂದೋಬಂಧ ಸಾಹಿತ್ಯಕ್ಕೆ ಒಂದು ಶಿಸ್ತುಬದ್ಧ ಅಧ್ಯಯನದ ಅಡಿಪಾಯ ಹಾಕಿಕೊಟ್ಟ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿ ಅವರು ಒಂದು ದೃಷ್ಟಿಯಿಂದ ೧೯೯೦ರಲ್ಲಿಯೇ ನನ್ನ ಸಾಹಿತ್ಯ ಬೆಳವಣಿಗೆಗೆ ವಿಮರ್ಶೆಯನ್ನು ಮೀರಿ ಸಾಹಿತಿ ಬೆಳೆಯಬೇಕೆಂಬ ಕಿವಿಮಾತು ಹೇಳಿದರು.ಸಾಹಿತಿ ಮುನ್ನುಡಿ ಬೆನ್ನುಡಿ ಬಗ್ಗೆ ತಲೆಕೆಡಿಸಿಕೊಳ್ಳದೇ ನಿಷ್ಠೆಯಿಂದ ಸಾಹಿತ್ಯ ರಚಿಸಬೇಕು ಎಂದರು.ಆಗ ನಾನು ನಾಲ್ಕನೇ ಪುಸ್ತಕ ಬರೆದಾಗ ೧೯೯೦ರ ಡಿಸೆಂಬರ್ ನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ನನ್ನ "ಸುಮಧುರ ವಚನಗಳು " ಕೃತಿಗೆ ಮುನ್ನುಡಿ ಬರೆಸಿಕೊಳ್ಳಲು ಹೋಗಿದ್ದೆ.ಯಾವುದೇ ಪುಸ್ತಕಕ್ಕೆ ಮುನ್ನುಡಿ ಅವಶ್ಯಕತೆ ಇಲ್ಲ.ಓದುಗರು ಮೆಚ್ಚುವಂತೆ ಬರೆದರೆ ಸಾಕು.ಎಂದುಹೇಳಿದ ಮಾತಿನಂತೆ ೧೯೯೦ರಿಂದ ೨೦೨೩ರವರೆಗೆ ೧೧೦ ಪುಸ್ತಕ ಪ್ರಕಟಣೆ ಮಾಡಲು ಸಾಧ್ಯವಾಗಿದೆ.ನನ್ನ ಪುಸ್ತಕಕ್ಕೆ ಮುನ್ನುಡಿ ಮತ್ತು ಬೆನ್ನುಡಿ ನನ್ನದೇ! ಸಾಹಿತ್ಯ ನಿಷ್ಠೆ ಕೈಬಿಟ್ಟಿಲ್ಲ.ಕನ್ನಡ ಸಾಹಿತ್ಯದ ಡಾ.ಎಂ.ಎಂ.ಕಲಬುರ್ಗಿ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು.
ಬರಹ :
ಡಾ.ಸಂಗಮೇಶ ತಮ್ಮನಗೌಡ್ರ ಸಾಹಿತಿ, ಮುಖ್ಯಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಮುಳಗುಂದ, ಗದಗ ಜಿಲ್ಲೆ.
Post a Comment