ಮಂಗಳೂರು : (Nov_11_2024)
ಮಾನವ ಹಕ್ಕುಗಳ ಮೇಲೆ ಕಣ್ಗಾವಲಿಡುವ 'ದಲಿತ್ ವಾಯ್ಸ್' ನಿಯತಕಾಲಿಕೆಯ ಸಂಸ್ಥಾಪಕ ಸಂಪಾದಕ, ಪತ್ರಕರ್ತ ಚಿಂತಕ, ಲೇಖಕ ಓಂತಿಬೆಟ್ಟು ತಿಮ್ಮಪ್ಪ ರಾಜಶೇಖರ ಶೆಟ್ಟಿ (ವಿ.ಟಿ.ರಾಜಶೇಖರ್) (92 ವರ್ಷ) ಅವರು ಬುಧವಾರ ನಿಧನರಾದರು.
ಇಲ್ಲಿನ ಶಿವಭಾಗ್ನಲ್ಲಿ ವಾಸಿಸುತ್ತಿದ್ದ ರಾಜಶೇಖರ್ ಅವರು ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆವ ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಎರಡೂವರೆ ದಶಕಗಳ ಕಾಲ ಪತ್ರಕರ್ತರಾಗಿ ದುಡಿದಿದ್ದರು.
ದಲಿತ ಪರ ಧ್ವನಿಯಾಗಲು 'ದಲಿತ್ ವಾಯ್ಸ್' ಸಂಘಟನೆಯನ್ನು ಕಟ್ಟಿದ್ದರು. ಅದರ ಮೂಲಕ 'ದಲಿತ ವಾಯ್ಸ್' ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದರು. ದೇಶದ ಸಾಮಾಜಿಕ ವ್ಯವಸ್ಥೆ, ಅದರಲ್ಲಿರುವ ಜಾತಿ ಮತ್ತು ಜನಾಂಗೀಯ ಅಸಮಾನತೆಗಳ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲ ಸದಾ ಶ್ರಮಿಸುತ್ತಿದ್ದರು. ಅಂಬೇಡ್ಕರ್ ವಾದ ಹಾಗೂ ಮಾರ್ಕ್ಸ್ವಾದವನ್ನು ಆಳವಾಗಿ ಅಧ್ಯಯನ ಮಾಡಿದ್ದರು.
'ದಲಿತ್- ದಿ ಬ್ಲ್ಯಾಕ್ ಅನ್ವಚಬಿಲಿಟಿ ಆಫ್ ಇಂಡಿಯಾ', 'ಬ್ರಾಹ್ಮಣಿಸಂ- ವೆಪನ್ಸ್ ಟು ಫೈಟ್ ಕೌಂಟರ್ ರೆವಲ್ಯೂಷನ್', 'ವೈ ಗೋಡ್ರೆ ಕಿಲ್ಸ್ ಡ್ ಗಾಂಧಿ', 'ಕಾಸ್ಟ್ - ಎ ನೇಷನ್ ವಿದಿನ್ ದ ನೇಷನ್', 'ನೊ ದ ಹಿಂದೂ ಮೈಂಡ್', 'ಹೌ ಮಾರ್ಕ್ಸ್ ಫೈಲ್ಡ್', 'ಹಿಂದು ಇಂಡಿಯಾ', 'ರೆಡಿ ರೆಫರೆನ್ಸ್ ಟು ರೆವೊಲ್ಯೂಷನ್', 'ಇಂಡಿಯಾ ಇಂಟೆಲೆಕ್ಚುವಲ್ ಡಸರ್ಟ್' ಮೊದಲಾದುವು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದರು.
ಅವುಗಳಲ್ಲಿ ಹಲವು ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಲಂಡನ್ ಇನ್ಸಿಟ್ಯೂಷನ್ ಆಫ್ ಸೌತ್ ಏಷ್ಯಾ (ಲಿಸಾ) ಪ್ರಶಸ್ತಿಯನ್ನು 2005ರಲ್ಲಿ ಹಾಗೂ ನ್ಯಾಷನಲ್ಕಾನ್ನೆಡರೆಷನ್ ಆಫ್ ಪ್ಯೂಮನ್ ಆರ್ಗನೈಸೇಷನ್ ನಿಂದ ಮುಕುಂದನ್ ಸಿ ಮೆನನ್ ಪ್ರಶಸ್ತಿಯನ್ನು 2018ರಲ್ಲಿ ಪಡೆದಿದ್ದರು. ಅವರು ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯ ವೋಂತಿಬೆಟ್ಟು ಬೀಡು ಮನೆತನದವರಾಗಿದ್ದ ಅವರ ತಂದೆ ಪಿ.ಎಸ್. ತಿಮ್ಮಪ್ಪ ಶೆಟ್ಟಿ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿದ್ದರು.
Post a Comment