-->
Bookmark

Karwar : ಲೋಕ ಕಲ್ಯಾಣಕ್ಕಾಗಿ ತಾಂಡಾದಲ್ಲಿ ವಿಶೇಷ ಪೂಜೆ : ಶಾಸಕ ಸತೀಶ್ ಶೈಲ್ ಗೆ ಆಹ್ವಾನ

Karwar : ಲೋಕ ಕಲ್ಯಾಣಕ್ಕಾಗಿ ತಾಂಡಾದಲ್ಲಿ ವಿಶೇಷ ಪೂಜೆ : ಶಾಸಕ ಸತೀಶ್ ಶೈಲ್ ಗೆ ಆಹ್ವಾನ 
ಕಾರವಾರ : (Nov_28_2024)

ಡಿಸೆಂಬರ್ 1ರ ರಂದು ನಡೆಯಲಿರುವ ವಿಶೇಷ ಪೂಜೆಗೆ ಕಾರವಾರ ಸಮೀಪದ ಬಿಣಗಾದ ಸೀತಾನಗರ ಮಹಾನಾಯಕ ತಾಂಡಾದ ಮುಖಂಡು ಶಾಸಕ ಸತೀಶ್ ಶೈಲ್ ಅವರಿಗೆ ಆಹ್ವಾನಿಸಲಾಗಿದೆ. ಡಿಸೆಂಬರ್ 1 ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೂಗಳತೆ ದೂರದಲ್ಲಿರುವ ಬಿಣಗಾದ ಸೀತಾನಗರ ಮಹಾನಾಯಕ ತಾಂಡಾದಲ್ಲಿ ಸಂತ ಸೇವಾಲಾಲ್ ಮತ್ತು ತಾಯಿ ಮರಿಯಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಲೋಕ ಕಲ್ಯಾಣಕ್ಕಾಗಿ ಪೂಜೆಗಳು ನಡೆಯುತ್ವೆ. ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಜೊತೆಗೆ ಇದು ನಿಜ ಕೂಡ ಹೌದು. ಭಕ್ತರು ಬೇಡಿಕೊಂಡ‌ ಬೇಡಿಕೆಗಳನ್ನ ಈಡೇರಿಸುವ ಶ್ರೀ ಸಂತ ಸೇವಾಲಾಲ್ ಮತ್ತು ತಾಯಿ ಮರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಕ್ಷಣಕ್ಕೆ ಶಾಕರು ಸಾಕ್ಷಿಯಾಗಲಿದ್ದಾರೆ ಎಂದು ತಾಂಡಾದ ನಾಯಕರಾದ ಮಂಜುನಾಥ್ ರಾಠೋಡ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. 

ಡಾ. ಜಗನ್ನಾಥ್ ರಾಠೋಡ್, ತಾಂಡಾದ ನಾಯಕ ಮಂಜುನಾಥ್ ರಾಠೋಡ್, ಸೇರಿದಂತೆ ತಾಂಡಾದ ಇತರೆ ಪ್ರಮುಖರು & ಬಂಜಾರ ಸಮುದಾಯ ಬಾಂಧವರು ಶಾಸಕರಿಗೆ ಆಹ್ವಾನಿಸಿದ್ದಾರೆ.
Post a Comment

Post a Comment