-->
Bookmark

Karwar : ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

Karwar : ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ಕಾರವಾರ : (Nov_22_2024)

ಮುಂಡಗೋಡ ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯ ಕೆಲ ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

'ವಸತಿ ಶಾಲೆಯ ಕೆಲವರಲ್ಲಿ ಜ್ವರ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ವಿಶೇಷ ವೈದ್ಯಕೀಯ ನಿಯೋಜನೆ ಮಾಡಲಾಗುತ್ತಿದೆ. ಮನೆಗೆ ಮರಳಲು ಮನವಿ ಮಾಡಿಕೊಂಡ ವಿದ್ಯಾರ್ಥಿಗಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸುತ್ತೆವೆ' ಎಂದರು.

'ಶಾಲೆಯಲ್ಲಿ 210 ವಿದ್ಯಾರ್ಥಿಗಳಿದ್ದಾರೆ. ಅವರ ಪೈಕಿ 125 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಮೀಪದ ಇತರ ಶಾಲೆಗಳಲ್ಲಿಯೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ' ಎಂದರು.

'ವಿದ್ಯಾರ್ಥಿಗಳು ಮನೆಗೆ ಮರಳಿದಾಗ ಸೊಂಕು ಬೇರೆಯವರಿಗೆ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಸೋಂಕಿತರು ಐಸೋಲೆಷನ್ ನಲ್ಲಿರುವಂತೆ ನಿಗಾ ವಹಿಸಲು ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಸೂಚನೆ ನೀಡಲಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
Post a Comment

Post a Comment