-->
Bookmark

Gajendragad : ವದೇಗೋಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಬೋನು ಇಟ್ಟರೂ ಆತಂಕ

Gajendragad : ವದೇಗೋಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಬೋನು ಇಟ್ಟರೂ ಆತಂಕ 
ಗಜೇಂದ್ರಗಡ : (Nov_29_2024)
ತಾಲೂಕಿನ ಗಡಿ ಗ್ರಾಮ ವದೇಗೊಳ ಬಳಿ ರೈತರಿಗೆ ಮತ್ತೆ ಎರಡು ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ತಾಲೂಕು ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೆರೆ ಹಿಡಿಯಲು ಬೋನು ಇಟ್ಟಿದ್ದಾರೆ.
ಜಿಲ್ಲೆಯ  ವೀರೇಂದ್ರ ವರಬಸಣ್ಣವರ್, ಎಸಿಎಫ್ ಪ್ರಕಾಶ್ ಪವಾಡಿಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಸಾಸ್ವಿಹಳ್ಳಿ ಮತ್ತು ಆರಣ್ಯ ಇಲಾಖೆ ಸಿಬ್ಬಂದಿಗಳು ರೈತರ ಆಳಲು ಆಲಿಸಿದರು. ಗ್ರಾಮದ ಮಲಿಯಮ್ಮದೇವಿ ಕೊಳ್ಳದ ಬಳಿಯಲ್ಲಿ ಕುರಿಗಾರರ 10 ಕ್ಕೂ ಹೆಚ್ಚು ಕುರಿಗಳು, ಆರು ನಾಯಿಗಳನ್ನು ಎರಡು ಚಿರತೆಗಳು ಬಲಿ ಪಡೆದಿದೆ. ಮಂಗಳವಾರ ಸಂಜೆ ದಾಳಿ ಮಾಡಿ ಹೊತ್ತುಕೊಂಡು ಹೋಗಿದೆ. ನಾವು ಪ್ರತ್ಯಕ್ಷ ನೋಡಿದ್ದೇವೆ ಎಂದು ಬಸವರಾಜ ಕುರಿ, ಸೋಮಲೆಪ್ಪ ರಾಠೋಡ, ಯಂಕಪ್ಪ ರಾಠೋಡ, ಗಣೇಶ ರಾಠೋಡ, ರಾಜು ರಾಠೋಡ,
ವೀರೇಶ್ ಮಾಳೋತ್ತರ್, ವೇಂಕಟಶ್ ರಾಠೋಡ್, ರಾಮು ಜಾಟೋತ್ತರ್, ಮಲ್ಲಪ್ಪ  ಕೇಮಪ್ಪ ಮಾಳೋತ್ತರ್, ಪೀರು ರಾಠೋಡ್, ರಾಮನಗೌಡರ್, ಶಶಿಕುಮಾರ್ ಮಾಳೋತ್ತರ್, 
ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಮತ್ತೆ ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ವದೇಗೋಳ, ಕುಂಟೋಜಿ, ಜಿಗೇರಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದಿನಂ ಪ್ರತಿ ಮತ್ತೆ ಚಿರತೆಗಳು ಕಾಣಿಸಿಕೊಳ್ಳತೊಡಗಿವೆ. ಇದಕ್ಕೆ ಗ್ರಾಮಸ್ಥರು, ರೈತರು, ಕುರಿಗಾಹಿಗಳು ಆತಂಕದಲ್ಲಿದ್ದಾರೆ.‌ ಅರಣ್ಯ ಇಲಾಖೆ‌ ಅಧಿಕಾರಿಗಳು ಬೋನು ಇಟ್ಟಿದ್ದಾರೆ. ಬೋನು ಇಟ್ಟ ನಂತರ ಅಧಿಕಾರಿಗಳು ಮತ್ತೆ ಇತ್ತ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.
Post a Comment

Post a Comment