-->
Bookmark

Gajendragad : ಮೂರು ಕ್ಷೇತ್ರದ ಉಪ ಚುನಾವಣೆ : ಅಭಿವೃದ್ಧಿಗೆ ಮತದಾರ ಮಣೆ : ಶಿವರಾಜ್ ಘೋರ್ಪಡೆ

Gajendragad : ಮೂರು ಕ್ಷೇತ್ರದ ಉಪ ಚುನಾವಣೆ : ಅಭಿವೃದ್ಧಿಗೆ ಮತದಾರ ಮಣೆ : ಶಿವರಾಜ್ ಘೋರ್ಪಡೆ 

ಉಪ ಚುನಾವಣೆಯಲ್ಲಿ ಕೈ ಹಿಡಿದ ಮತದಾರ : ಪಟ್ಟಣದಲ್ಲಿ ಕಾರ್ಯಕರ್ತರ ಹರ್ಷೋದ್ಘಾರ 

ಗಜೇಂದ್ರಗಡ : (Nov_23_2024)

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಗಜೇಂದ್ರಗಡದಲ್ಲಿ ಕೈ ಪಕ್ಷದ ಮುಖಂಡರು, ಕಾರ್ಯಮರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೈ ಕಾರ ಹಾಕಿದರು. 

ಹಾವೇರಿಯ ಶಿಗ್ಗಾವಿಯಲ್ಲಿ ನಡೆದ ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮ್ಮದ್ ಖಾನ್ ಪಠಾಣ್ ಅವರು ಬಿಜೆಪಿಯ ಭರತ್ ಬೊಮ್ಮಾಯಿ ವಿರುದ್ಧ ಗೆದ್ದು ಬೀಗಿದ್ದಾರೆ. ಇದರಿಂದ ಕಮಲದ ಭಧ್ರ ಕೋಟೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದು ಪುರಸಭೆ ಸದಸ್ಯ ಶುವರಾಜ್ ಘೋರ್ಪಡೆ ಹೇಳಿದರು. ಈ ಗೆಲುವು ಮತದಾರರ ಗೆವುವಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಮತದಾರರು ಜೈಕಾರ ಹಾಕಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 

ಮೂರು ಕ್ಷೇತ್ರದ ಗೆಲುವಿಗೆ ಮತದಾರರೇ ಕಾರಣ. ಇದು ಪ್ರಜಾಪ್ರಭುತ್ವದ ಗೆಲುವು‌. ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿದ್ದವೂ. ಚುನಾವಣೆ ಫಲಿತಾಂಶದಿಂದ ಮತದಾರ ಉತ್ತರಿಸಿದ್ದಾರೆ ಎಂದು ಇನ್ನುಳಿದ ಕಾಂಗ್ರೆಸ್ ಮುಖಂಡರು ತಮ್ಮ ಅನಿಸಿಕೆ ಹಂಚಿಕೊಂಡರು. 

ಶಿವರಾಜ್ ಗೋರ್ಪಡೆ  ರಾಜು ಸಾಂಗ್ಲಿ ಕರ್ . ಮುರ್ತುಜ ಡಾಲಾಯತ್ . ವೆಂಕಟೇಶ್ ಮದುಗಲ್ . ಸುಭಾಷ್ ಮ್ಯಾಗೇರಿ . ಮುತ್ತಣ್ಣ ಮ್ಯಾಗೇರಿ. ಮುದಿಯಪ್ಪ ಮುಧೋಳ್.H S ಸೋಂಪುರ. ಹಸನ್ ಸಾಬ್ ತಟಗಾರ, ಶಶಿಧರ್ ಹೂಗಾರ್, ರಫೀಕ್ ತೋರಗಲ್ಲ, ಉಮೇಶ್ ರಾಠೋಡ್, ಸಿದ್ದುಗೊಂಗಡಶೆಟ್ಟಿಮಠ ಸೇರಿದಂತೆ ಮುಖಂಡರು ಕಾರ್ಯಕರ್ತರು, ಭಾಗವಹಿಸಿದ್ದರು. 
Post a Comment

Post a Comment