-->
Bookmark

Gajendragad : ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸೌಹಾರ್ದತೆಯ ಸುಂದರ ಸಮಾಜ ಕಟ್ಟಬೇಕಿದೆ: ತಟಗಾರ್

Gajendragad : ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಸೌಹಾರ್ದತೆಯ ಸುಂದರ ಸಮಾಜ ಕಟ್ಟಬೇಕಿದೆ: ತಟಗಾರ್
ಗೌಸೆ ಆಜಂ ಕಾನ್ಪರೇನ್ಸ್( ಧಾರ್ಮಿಕ ಪ್ರವಚನ) ಪೋಸ್ಟರ್ ಬಿಡುಗಡೆ
ಗಜೇಂದ್ರಗಡ ನ : (Nov_25_2024)

ಮಹಮ್ಮದ್ ಪೈಗಂಬರ್ ಅವರು ಮನುಕುಲದ ಪ್ರವಾದಿಯಾಗಿ ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಹಸನಸಾಬ್ ತಟಗಾರ್ ಹೇಳಿದರು.
ನಗರದ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿಸೆಂಬರ್ 13 ರಂದು ನಡೆಯಲಿರುವ ಗೌಸೆ ಆಜಂ ಕಾನ್ಪರೇನ್ಸ್ ಧಾರ್ಮಿಕ ಪ್ರವಚನದ ಪೋಸ್ಟರ್ ಶಾದಿಮಹಲ್ ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ  ಅಣಿಯಾಗಿದ್ದೇವೆ ಎಂದರು.

ಗೌಸೆ ಆಜಂ ಕಾನ್ಪರೇನ್ಸ್ ಕಮೀಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ ಈ ಕಾರ್ಯಕ್ರಮಕ್ಕೆ ಜಗತ್ತಿನ ಖ್ಯಾತ ಧಾರ್ಮಿಕ ಪ್ರವಚನಕಾರರು, ವಾಗ್ಮಿಗಳು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ  ಸೈಯದ್ ಮುಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ ಪ್ರವಾದಿಗಳ  ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ  ಇತಿಹಾಸದಲ್ಲಿಯೇ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ,ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.

ಗೌಸೆ ಆಜಂ ಕಾನ್ಪರೇನ್ಸ್ ಕಮೀಟಿಯ ಹಣಕಾಸು ಸಮಿತಿ ಹಿರಿಯ ಸದಸ್ಯ ಎ ಡಿ ಕೋಲಕಾರ್ ಮಾತನಾಡಿ ಡಿಸೆಂಬರ್ 13 ರಂದು ಪಟ್ಟಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ   ಸೈಯದ್ ಮೊಹಮ್ಮದ್ ನೂರಾನಿ, ಸುಫಿಯಾನ್ ಸಖಾಫಿ ಅವರು ಕನ್ನಡದಲ್ಲಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದು ಸಮಾಜ ಭಾಂದವರು ತನು ಮನ ಧನದಿಂದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು, 8-10 ಸಾವಿರ ಜನಸಂಖ್ಯೆ ಸೇರುವ ಸಾಧ್ಯತೆ ಇದೆ ಎಂದರು.
 
ಧರ್ಮ ಗುರುಗಳಾದ ಯಾಸೀನ್ ಮೌಲಾನ ಅವರು ಮಾತನಾಡಿದರು. 

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೌಲಾನಾ ಖಲೀಲದ ಅಹ್ಮದ್ ಖಾಜಿ, ರಫೀಕ್ ಮೌಲಾನ , ಕಾರ್ಯದರ್ಶಿ ಫಯಾಜ್ ತೋಟದ್, ದಾದು ಹಣಗಿ, ನಾಸೀರ್ ಸುರುಪುರ್, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ್, ಆರೀಫ್ ಮನಿಯಾರ್, ಅಲಿ ಕಿಲ್ಲೆದಾರ್, ಪಿ.ಕೆ ಬಾಗವಾನ್, ಎ ಕೆ ಕಾತರಕಿ, ಶಾಮೀದಸಾಬ್ ದಿಂಡವಾಡ್, ರಸೂಲಸಾಬ್ ಆರಗಿದ್ದಿ, ಮೈಬುಸಾಬ್ ಚಿನ್ನೂರ್, ಕೆ.ಸಿ ಗೋಡೇಕಾರ್, ಖಲಂದರ್ ಡಾಲಯತ್, ಆಸೀಫ್, ಸಲೀಂ ಮಾನಿಯಾರ್, ಸಲಿಂ ಕೊಪ್ಪಳ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.

Post a Comment

Post a Comment