Gajendragad : ಬಿಜೆಪಿ ಅಧಿಕಾರಾವಧಿಯಲ್ಲಿ ತಹಶೀಲ್ದಾರ್ ಹುದ್ದೆಗೆ ಎಷ್ಟು ಹಣ ಕೊಟ್ಟಿದ್ದರು : ಮಾಜಿ ಸಚಿವರಿಗೆ ಸಿದ್ದಪ್ಪ ಬಂಡಿ ಸವಾಲು
ಗಜೇಂದ್ರಗಡ : (Nov_07_2024)
ತಹಶಿಲ್ದಾರ್ ದುಡ್ಡು ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದಾರೆ ಎಂದು ಹೇಳುವ ಮಾಜಿ ಶಾಸಕರ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿದ್ದ ಉನ್ನತ ಹುದ್ದೆಯ ಅಧಿಕಾರಿಗಳ ಪೋಸ್ಟಿಂಗ್ ಗೆ ಎಷ್ಟು ಹಣ ನಿಗದಿ ಮಾಡಿದ್ದರು ಎಂಬುದನ್ನ ಬಹಿರಂಗ ಪಡಿಸಲಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅವರಿಗೆ ಸವಾಲು ಹಾಕಿದರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್, ನರೇಗಲ್ ಬ್ಲಾಕ್ ಕಾಂಗ್ರೆಸ್, ರೋಣ ಬ್ಲಾಕ್ ಕಾಂಗ್ರೆಸ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಕೊಟ್ಟು ಪೋಸ್ಟಿಂಗ್ ಮಾಡಿಸಿದ್ದಾರೆ ಎಂಬ ಆರೋಪ ಆಧಾರ ರಹಿತ ಎಂದರು. ಅಲ್ಲದೇ, ರೈತರ ಬಗ್ಗೆ ಮಾತನಾಡುವ ಇವರು, ಶಾಸಕ ಜಿಎಸ್ ಪಾಟೀಲ್ ಅವರು, ರೈತರಿಗಾಗಿ ತಿಂಗಳುಗಳ ಕಾಲ ಹೋರಾಟ ನಡೆಸಿದ್ದಾರೆ. ಒಂದೆ ಒಂದು ಕೆಟ್ಟಪದವನ್ನ ಬಳಸಲಿಲ್ಲ ಎಂದು ಈ ಹಿಂದೆ ಟ್ರ್ಯಾಕ್ಟರ್ ರ್ಯಾಲಿ ವೇಳೆ, ಸಂಧಾನಕ್ಕಾಗಿ ಬಂದ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ಮಾತನಾಡಿರುವುದನ್ನ ಸ್ಮರಿಸಿದರು. ಅಧಿಕಾರಿಗಳ ಕಾರ್ಯವನ್ನ ನೆನೆಪಿಸಿದ್ದನ್ನ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಮೆಲುಕು ಹಾಕಿದರು.
ಇದೇ ವೇಳೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ, ಬಿಜೆಪಿ ದರ್ಪದ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಯಾರೊಂದಿಗೆ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಅಧಿಕಾರಿಗಳ ವಿರುದ್ಧದ ದರ್ಪದ ವರ್ತನೆಯನ್ನ ಕೈ ಬಿಡಿ ಎಂದು ಹೇಳಿದರು.
ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್ ಮಾತನಾಡಿ, ಮಾಜಿ ಸಚಿವರು ತಹಶೀಲ್ದಾರ್ ಅವರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಮಾಜಿ ಸಚಿವರ ಹೇಳಿಕೆಯಿಂದ ಕ್ಷೆತ್ರದ ಘನತೆ ಹಾಳು ಗೆಡವಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೆರಮನ್ ಮುದಿಯಪ್ಪ ಮುಧೊಳ, ಬಸವರಾಜ ಶೀಲವಂತರ್, ವೆಂಕಟೇಶ ಮುದ್ಗಲ್, ಬಸ ವರಾಜ್ ಹೂಗಾರ, ಉಮೇಶ ರಾಠೋಡ್, ರಾಮಚಂದ್ರ ಹುದ್ದಾರ, ವಕೀಲರಾದ ರಫಿಕ್ ತೊರಗಲ್, ಶರಣಪ್ಪ ಉಪ್ಪಿನಬೆಟಗೇರಿ,ಸಿದ್ದಪ್ಪ ಚೊಳಿನ, ಶರಣಪ್ಪ ಮಾಳಗಿ, ಸಿದ್ದು ಗೊಂಗಡಶೆಟ್ಟಮಠ, ಬಸವರಾಜ್ ಮಾಳೋತ್ತರ್, ರಾಜೂರ್ ಸುರೇಶಗೌಡ ಪಾಟೀಲ್, ರಾಜು ಹಿರೇಮಠ, ಬಸವರಾಜ್ ಹೂಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment