ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಲು, ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟಿಸಲು ಎಸ್.ಎಫ್.ಐ ಒತ್ತಾಯಿಸಿದೆ. ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್.ಐ ಗಜೇಂದ್ರಗಡ ತಾಲೂಕು ಸಮಿತಿ ರಾಜ್ಯದಲ್ಲಿ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಲು ಹಾಗೂ ಸರಿಯಾದ ಸಮಯಕ್ಕೆ ಪದವಿ ಫಲಿತಾಂಶ ಪ್ರಕಟಿಸಲು ಒತ್ತಾಯಿಸಿ, ಗಜೇಂದ್ರಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹೋರಾಟ ನಡೆಸಿದರು.
ಎಸ್.ಎಫ್.ಐನ ಗದಗ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಯಾದ ನಂತರ ಸುಮಾರು 22ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 51 ಲಕ್ಷಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರ ಚಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಕಪಟ್ಟಿ ವಿತರಿಸಬೇಕು. ಹಾಗೂ ಸಮಕ್ಕೆ ಸರಿಯಾಗಿ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ
ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ NEP ರದ್ದುಗೊಳಿಸಿ (SEP) ಜಾರಿಗೋಳಿಸಿದೆ. ಆದ್ರೆ, ರಾಜ್ಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗುತ್ತಿಲ್ಲ. ಹಾಗಾಗಿ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗುತ್ತಿದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಗೆ ಹೋಗಿ ಅಂಕ ಪಟ್ಟಿಗಳನ್ನು ಕೇಳಿದರೆ ಇಲ್ಲಿ ಸಿಗಲ್ಲ. ನಿಮ್ಮ DG Locker ನಲ್ಲಿ ಸಿಗುತ್ತೆ. ಅಲ್ಲಿ ತೆಗೆದುಕೊಂಡು ಹೋಗಿ ಅಂತ ವಿವಿಗಳು ವಿದ್ಯಾರ್ಥಿಗಳಿಗೆ ಹಾರಿಕೆ ಉತ್ತರ ನೀಡುತ್ತಿರುವುದು ವಿಪರ್ಯಾಸ ಎಂದರು. ರಾಜ್ಯದ 22 ವಿವಿಗಳು ಶೀಘ್ರದಲ್ಲೇ ಅಂಕಪಟ್ಟಿ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೋರಾಟ ನಡೆದ ಸ್ಥಳಕ್ಕೆ ತಹಶಿಲ್ದಾರ್ ಕಿರಣಕುಮಾರ್ ಕುಲಕರ್ಣಿ ಆಗಮಿಸಿ, ಮನವಿ ಸ್ವೀಕರಿಸಿ, ಮೇಲಧಿಕಾರಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ಗಜೇಂದ್ರಗಡ ತಾಲೂಕ ಸಮಿತಿ ಅಧ್ಯಕ್ಷ ಅನಿಲ್ ರಾಠೋಡ್, ಶರಣು ಮಾದರ್, ಯುವರಾಜ್ ಲಮಾಣಿ, ಹನುಮಂತ್ ಮಾದರ್, ಸಂಗಿತಾ ಪಾಟೀಲ್, ಮುಕ್ತಾ, ಪ್ರಜ್ವಲ್ ನಾಯಕ್, ಪ್ರದೀಪ್ ನರಿ, ವೀರೇಶ್ ರಾಠೋಡ್, ಶ್ರೀದೇವಿ ಕುಂಬಾರ್, ಕವಿತಾ ,ಕಳಕಮ್ಮ ತಳವಾರ್ ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment