-->
Bookmark

Gajendragad : ಓದುಗರನ್ನ ಕೈ ಬೀಸಿ ಕರೆಯುತಿದೆ : ಸಂಗಾತ ಪುಸ್ತಕ ಮಳಿಗೆ

Gajendragad : ಓದುಗರನ್ನ ಕೈ ಬೀಸಿ ಕರೆಯುತಿದೆ : ಸಂಗಾತ ಪುಸ್ತಕ ಮಳಿಗೆ 
ಗಜೇಂದ್ರಗಡ : (Nov_12_2024)
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪ್ರಥಮ ಬಾರಿಗೆ ಪುಸ್ತಕ ಮಳಿಗೆ ಆರಂಭವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮುಗಿಸಿ, ಸ್ವಂತ ಪುಸ್ತಕ ರೂಪದ ಪತ್ರಿಕೆ ಆರಂಭಿಸಿ, ಯಶಸ್ವಿಯಾಗಿದ್ದಾರೆ ಸಾಹಿತಿ, ಚಿಂತಕ, ಕವಿ, ಬರಹಗಾರ ಟಿ.ಎಸ್ ಗೊರವರ್ ಅವರು.

ಮೂಲತಃ ಗಜೇಂದ್ರಗಡದಿಂದ ಕೂಗಳತೆ ದೂರದಲ್ಲಿರುವ ರಾಜರ ಊರಾದ ರಾಜೂರಿನವರು. ಚಿಕ್ಕಂದಿನಿಂದಲೇ, ಪುಸ್ತಕದೆಡೆಗೆ ಆಕರ್ಷಿತರಾದ ಇವರು, ನಂತರ ಪುಸ್ತಕ ಭಂಡಾರವನ್ನೆ ತೆರೆದಿದ್ದಾರೆ‌. 

ಗಜೇಂದ್ರಗಡ ಬಂಡಿ ಗಾರ್ಡನ್ ಹಿಂದೆ ಪುಸ್ತಕ ಮಳಿಗೆ ಇದ್ದು, ಬಹುತೇಕ ಸಾಹಿತಿಗಳ ಪುಸ್ತಕಗಳು ಲಭ್ಯ ಇವೆ. ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ, Competitive Exam's ಗೆ ಬೇಕಾಗುವ ಪುಸ್ತಕಗಳು ಒಂದೆ ಸೂರಿನಡಿ ಸಿಗಲಿದೆ... 

ಜೊತೆಗೆ ಸಂಜೆ ಅಥವಾ ವಾರಾಂತ್ಯದಲ್ಲಿ ಸಮಯ ಕಳೆಯಲು ಸಾಹಿತಿಗಳು,  ಬರಹಗಾರರು, ಶಿಕ್ಷಕರು, ಲಕ್ಚರರರ್ಸ್, ಪ್ರೊಫೆಸರ್ ಇಲ್ಲಿ ಬಂದು ಸಮಯ ಕಳೆಯತ್ತಾರೆ. 

ಇಲ್ಲಿ ಮತ್ತೊಂದು ‌ವಿಶೇಷ ಅಂದ್ರೆ ಮಕ್ಕಳ ಓದಿಗೆ ಬೇಕಾಗುವ ಪುಸ್ತಕಗಳು ಇವೆ...
Post a Comment

Post a Comment