ಗಜೇಂದ್ರಗಡ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಜೆಟಿಪಿಎಸ್ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಎಸ್ ಪಟ್ಟೇದ್, ಮಕ್ಕಳಲ್ಲಿನ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ ಎಂದು ಹೇಳಿದರು. ಕಲಿಕೆಗಷ್ಟೆ ಸೀಮಿತವಾಗದಿರಲಿ, ಪಾಲಕರು ಮಕ್ಕಳ ಮೇಲೆ ಓದಿನ ಹೊರೆ ಹೊರಿಸುವುದನ್ನ ಕಡಿಮೆ ಮಾಡಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಜೇಂದ್ರಗಡ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲ ಪ್ರಧಾನ ಗುರುಗಳು ಭಾಗವಹಿಸಿದ್ದರು ನಿರ್ಣಾಯಕ ರಾಗಿ ಗಜೇಂದ್ರಗಡ ಉತ್ತರ ವಲಯದ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Post a Comment