ಗಜೇಂದ್ರಗಡ : (Move_05_2024)
ಸಾರ್ವಜನಿಕ ಸೇವೆಯಲ್ಲಿರುವ ಪರ್ತಕರ್ತರು, ರಾಜಕಾರಣಿಗಳ, ನೌಕರರ ವರ್ತನೆ ಸೌಜನ್ಯವಾಗಿರಬೇಕು. ಜತೆಗೆ ಪರಸ್ಪರ ಗೌರವದ ವರ್ತನೆಯನ್ನ ಜನ ನಿರೀಕ್ಷಿಸುತ್ತಾರೆ. ಆದ್ರೆ, ಜನಸೇವೆ ಜತೆಗೆ ಕರ್ತವ್ಯ ನಿರತರ ಮೇಲೆ ದರ್ಪ ತೋರಿಸುವದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವಲ್ಲ. ಇದರಿಂದ ವೈಯಕ್ತಿಕ ಘನತೆಗೆ ಕುಂದು ಉಂಟಾಗುತ್ತದೆ. ಮತ್ತು ಇದರಿಂದ ಆಡಳಿಯ ಯಂತ್ರಕ್ಕೆ ತೊಂದರೆಯಾಗಲಿದೆ.
ಹಿನ್ನೆಲೆ :
ಮಾಜಿ ಶಾಸಕರ ವರ್ತನೆಗೆ ನೌಕರರ ಸಂಘ ಖಂಡನೆ
ಪಟ್ಟಣದಲ್ಲಿ ಕರ್ತವ್ಯ ನಿರತ ತಹಸೀಲ್ದಾರರಿಗೆ ಸಾರ್ವಜನಿಕ ಎದರು ಏಕವಚನದಲ್ಲಿ ನಿಂದಿಸಿ ಬೆದರಿಕೆ ಹಾಕಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಅವರ ವರ್ತನೆ ಖಂಡಿಸಿ, ಮನವಿ ಸಲ್ಲಿಸಲಾಯ್ತು.
ದಂಡಾಧಿಕಾರಿಗಳಿಗೆ ರಕ್ಷಣೆ ನಿಡುವುದರ ಜತೆ ತಪ್ಪಿತಸ್ಥ ಮಾಜಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಕಂದಾಯ ಇಲಾಖೆ ನೌಕರರ ಸಂಘ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ, ಕಾನೂನು, ನೀತಿ, ನಿಯಮ ಗಾಳಿಗೆ ತೂರಿ ಮಾಜಿ ಶಾಸಕರು ಅಧಿಕಾರಿಗಳ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ. ಅಧಿಕಾರಿಗಳ ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಪ್ರತಿಭಟನಾ ನಿರತ ಅಧಿಕಾರಿಗಳು ಹೇಳಿದರು. ಇಂತಹ ಘಟನೆ ಮರು ಕಳಿಸದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಗಜೇಂದ್ರಗಡ ತಹಶಿಲ್ದಾರ ಕಿರಣಕುಮಾರ ಸರ್ಕಾರದ ನಿಯ ಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಅಧಿಕಾರಿ, ನೌಕರರಿಗೆ ತೊಂದರೆ ನೀಡಿ, ನಿಷ್ಪಕ್ಷಪಾತ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ನಿತ್ಯ ಸಾರ್ವಜನಿಕ ಸೇವೆಯಲ್ಲಿ ನಿರತರಾದ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಲು ಮತ್ತು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದರು.
ಶಿರಸ್ತೆದಾರ ಪಿ.ಬಿ. ಶಿಂಗ್ರಿ, ಗ್ರಾಮ ಆಡಳಿತಾಧಿಕಾರಿ ಉಮೇಶ ಅರಳಿಗಿಡದ್, ಪಿ.ಬಿ. ಮಾಲಿಪಾಟಿಲ್, ಕೆ.ವೈ.ಕುಷ್ಟಗಿ, ಶಾಹಿನ್ ಗುರಿಕಾರ್, ವೈಭವಿ ಚೌದರಿ, ಸೌಮ್ಯ ಕರಬುದಿ, ಹರಿಶ್ ಬಡಕುದರಿ, ಭಾರತಿ ಹೊರಪೇಟೆ, ಹರಿಶ ಗೌರಿ, ಡಿ.ಯು. ಇಟಗಿ, ಶರಣಪ್ಪ ತಳವಾರ್, ಮಾರುತಿ ಅವದೂತ್, ನಾಗಪ್ಪ ದುಮ್ಮಾಳ್, ಮೈಬುಸಾಬ ರಂಗನಪೇಟೆ, ಕೆ.ವೈ. ಸ್ವಾಮಿ, ಯಲ್ಲಮ್ಮಾ ಬಾರಕೇರ ಇನ್ನತರ ನೌಕರರು ಇದ್ದರು.
ಮನವಿ ಸ್ವಿಕರಿಸಿದ ಎಸಿ ಗಂಗಪ್ಪ ಎಂ. ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಮುಂದಾಗುತ್ತೆವೆ ಎಂದು ಭರವಸೆ ನೀಡಿದರು.
ಘಟನೆ ನಡೆಯುತ್ತಿದ್ದಂತೆ ಕಾಂಗ್ರೆಸ್ ನಾಯಕ ಸಿದ್ದಪ್ಪ ಬಂಡಿ ಅವರು ಬಿಜೆಪಿ ಮತ್ತು ಮಾಜಿ ಶಾಸಕರ ನಡೆಯನ್ನ ಖಂಡಿಸಿದರು. ಮುಂಬರುವ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ಹೇಳಿದ್ದರು.
Post a Comment