-->
Bookmark

Gajendragad : ಜನಸಾಮಾನ್ಯರಿಗೆ ತೊಂದರೆಯಾದಾಗ ನಿದ್ದೆಯಲ್ಲಿದ್ದ ಪ್ರತಿಪಕ್ಷ ಎಚ್ಚರ ಗೊಂಡಿದೆ

Gajendragad : ಜನಸಾಮಾನ್ಯರಿಗೆ ತೊಂದರೆಯಾದಾಗ ನಿದ್ದೆಯಲ್ಲಿದ್ದ ಪ್ರತಿಪಕ್ಷ ಎಚ್ಚರ ಗೊಂಡಿದೆ 

ಗಜೇಂದ್ರಗಡ : (Nov_04_2024)

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ವಕ್ಫ್ ವಿಷಯಕ್ಕೆ ಸಂಭಧಿಸಿದಂತೆ ಮನವಿ ಕೊಡಲು ತೆರಳಿದಾಗ ಮಾಜಿ ಸಚಿವರಾದ ಕಳಕಪ್ಪ ಬಂಡಿ ಅವ್ರು, ತಡವಾಗಿ ಬಂದು ಮನವಿ ಸ್ವೀಕರಿಸಿದ ತಹಶಿಲ್ದಾರ್ ಕಿರಣಕುಮಾರ್ ಕುಲಕರ್ಣಿ ಅವರಿಗೆ ಆವಾಜ್ ಹಾಕಿದ್ದಾರೆ. ಸೂರ್ಯ, ಚಂದ್ರ ಇರೋವರೆಗೂ ಇರ್ತಿಯಾ, ಪೊಸ್ಟಿಂಗ್ ಮಾಡಿಕೊಂಡು ಬಂದಿರ್ತಿರಿ ಅಂತಾ ಹೇಳಿದ್ದಾರೆ. ಆದ್ರೆ, ಇದೇ ತಹಶಿಲ್ದಾರ್ ಕಚೇರಿಯಲ್ಲಿ ಬಡವರು ಬಂದಾಗ ತಿಂಗಳುಗಳ‌ ಕಾಲ ಓಡಾಟ ನಡೆಸಿದ್ರು, ಅವರ ಕೆಲಸಗಳು ಆಗುವುದಿಲ್ಲ. ಹಳ್ಳಿಗಳಿಂದ ಬಂದ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದಾಗ ಮಲಗಿ ನಿದ್ದೆ ಮಾಡುತ್ತಿದ್ದ ಪ್ರತಿಪಕ್ಷ ಈಗ ನಿದ್ದೆಯಿಂದ ಎಚ್ಚರಗೊಂಡಂತೆ ಕಾಣುತ್ತಿದೆ... 

ತಮಗೆ ಸಮಯದ ಅರಿವು ಇದೆ. ಆದ್ರೆ, ಜನ ಸಾಮಾನ್ಯರ ಸಮಯಕ್ಕೆ ಬೆಲೆನೇ ಇಲ್ವಾ‌‌‌‌‌‌‌ ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ...
Post a Comment

Post a Comment