ಗಜೇಂದ್ರಗಡ : (Nov_15_2024)
ಕಾರುಡಗಿಮಠ ಆಸ್ಪತ್ರೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಸೂಡಿ ಗ್ರಾಮದ 55 ವರ್ಷದ ಮಮತಾಜ್ ಸಾಲಿಮನಿ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ 4.5 ಕೆಜಿ ಗಡ್ಡೆಯನ್ನ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಯಿತು. ಬಾಳೆಹಣ್ಣು ವ್ಯಾಪಾರ ಮಾಡುವ ಇವರು, ಬಹುದಿನಗಳಿಂದ ಹೊಟ್ಟೆ ನೋವಿನಿಂದ ಪರದಾಡುತ್ತಿದ್ದರು ಎನ್ನಲಾಗಿದೆ.
ಡಾ. ಸುನಿಲ್ ಕುಮಾರ್ ಸಂಗನಾಳ್ ನೇತೃತ್ವದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಯಿತು. ಸುನಿಲಕುಮಾರ್ ಸಂಗನಾಳ್ ಅವರಿಗೆ ಅರವಳಿಕೆ ತಜ್ಞರಾದ ಡಾ. ಕೃಷ್ಣ ಹೊಟ್ಟೆ, ಡಾ. ಆನಂದ್ ಪಾಟೀಲ್, ಆಸ್ಪತ್ರೆ ಸ್ಟಾಫ್ ಶರಣಮ್ಮ ನಡಶೇಶಿ, ವಿರೂಪಾಕ್ಷ ಹಿರೇಮಠ, ಮುಜಾಮಿಲ್ ವಡ್ಡಟ್ಟಿ, ಶ್ವೇತ ಗಾಳಿ, ವಿರೇಶ್ ಬಡಿಗೇರ್, ದವಲಬಿ ಹಾಗೂ ಇತರೆ ಸಿಸ್ಟರ್ಸ್, ಸಾತ್ ನೀಡಿದ್ದರು.
ಕೆಲ ಘಟನೆಗಳನ್ನ ಹೊರತು ಪಡಿಸಿ, ಉಳಿದಂತೆ ಜನ ಸಮಾನ್ಯರಿಗೆ ಹತ್ತಿರವಾಗುತ್ತಿದೆ ಕಾರುಡಗಿಮಠ ಆಸ್ಪತ್ರೆ ಎಂದು ವ್ಯವಸ್ಥಾಪಕರಾದ ಪ್ರಶಾಂತ್ ರಾಠೋಡ್ ಮತ್ತು ಕೊಟ್ರೇಶ್ ಚಿಲಕಾ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
Post a Comment