ಅದ್ದೂರಿಯಾಗಿ ಕಾರ್ತಿಕೋತ್ಸವವನ್ನ ಆಚರಿಸಲಾಯ್ತು. ಕಾರ್ತಿಕ ಮಾಸ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಜೇಂದ್ರಗಡ ಗುಡ್ಡದ ಮೇಲೆ ನೆಲೆಸಿರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಿಸಲಾಯ್ತು. ಪವನ ವಿದ್ಯುತ್ ಕೇಂದ್ರದಲ್ಲಿ ಕಾರ್ಯ ನಿತ್ವಹಿಸುವ ಎಲ್ಲ ಕೆಲಸಗಾರರು ಉಪಸ್ಥಿತರಿದ್ದರು. ಈ ವೇಳೆ, ಮಾತನಾಡಿದ ಭದ್ರತಾ ಸಿಬ್ಬಂದಿ ಮಹೇಶ್ ರಾಠೋಡ್, ಹಗಲು ರಾತ್ರಿ ಎನ್ನದೇ ವರ್ಷಪೂರ್ತಿ ನಮಗೆ ರಕ್ಷಣೆ ನೀಡುತ್ತಿರುವ ಶ್ರೀ ಆಂಜನೇಯನಿಗೆ ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ ಸಲ್ಲಿಸಿದ್ದೇವೆ. ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನಡೆದಿವೆ. ಈ ಭಾಗದ ಆರಾಧ್ಯ ದೈವ ಶ್ರೀ ಕಾಲಕಾಲೇಶ್ವರ ಸನ್ನಿಧಿಯಲ್ಲಿರುವುದೇ ಒಂದು ಭಾಗ್ಯ ಎಂದರು.
ಸೈಟ್ ಇಂಜಿನಿಯರ್ ವಿಶ್ವನಾಥ್ ದೇವಗಿರಿಕರ್, ನೀಲಕಂಠ ಲಮಾಣಿ, ಸೂಪರ್ವೈಸರ್ ವಾಸು ಮಾಳೋತ್ತರ್, ಸಿಬ್ಬಂದಿ ಚಂದ್ರಶೇಖರ್, ಭದ್ರತಾ ಸಿಬ್ಬಂದಿಗಳಾದ ಮಹೇಶ್ ರಾಠೋಡ್, ಸಂಗಪ್ಪ ಚವ್ಹಾಣ್, ಫಕಿರಪ್ಪ ರಾಠೋಡ್, ಮಲ್ಲು ಗೊನ್ನಾಳ್, ಸಿನ್ನೂರ್ ಅಜ್ಮೀರ್, ಭೀಮ್ಸಿ ತಳವಾರ್, ಮಾರುತಿ ಭಜಂತ್ರಿ, ಶರಣಪ್ಪ ಲಮಾಣಿ, ಶಿವಪ್ಪ ತೇಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment