-->
Bookmark

Gajendragad : ವಕ್ಫ್ ಅವಾಂತರ : ಬೃಹತ್ ರಸ್ತೆ ರೊಖೋ ಚಳುವಳಿ ಪ್ರತಿಭಟನೆ

Gajendragad : ವಕ್ಫ್ ಅವಾಂತರ : ಬೃಹತ್ ರಸ್ತೆ ರೊಖೋ ಚಳುವಳಿ ಪ್ರತಿಭಟನೆ 
ಗಜೇಂದ್ರಗಡ : (Nov_12_2024)
ರಾಜ್ಯಾದ್ಯಂತ ರೈತರ, ಮಠ ಮಾನ್ಯಗಳ ಆಸ್ತಿಯನ್ನ ವಕ್ಫ್ ಹೆಸರಿನಲ್ಲಿ ನಮೂದಾಗಿರುವುದನ್ನ ಬಿಜೆಪಿ ಅಂಗ ಸಂಸ್ಥೆ ಕಟುವಾಗಿ ಟೀಕಿಸಿದೆ. ಇನ್ನೂ, ಸರ್ಕಾರ ರೈತರ ಹೆಸರಿನಲ್ಲಿರುವ ಆಸ್ತಿಯ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. 

ಹಾಲಕೆರೆಯ ಮಠದ ಅನ್ನ ಪ್ರಸಾದದ ಪಹಣಿಯಲ್ಲೂ ವಕ್ಫ್ ಹೆಸರು ಇರುವುದನ್ನ ಬಿಜೆಪಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿ ವಿರೋಧಿಸಿತ್ತು. ಈಗ ವಿ.ಹೆಚ್.ಪಿ ವಿರೋಧ ವ್ಯಕ್ತಪಡಿಸಿದೆ. ವಿ.ಹೆಚ್.ಪಿ ಗಜೇಂದ್ರಗಡ ಘಟಕದಿಂದ ಇದೆ ನವೆಂಬರ್ 13 ರಂದು ಪಟ್ಣಣದ ಜಗದಂಬಾ ದೇವಸ್ಥಾನದಿಂದ ಕೆಕೆ ಸರ್ಕಲ್ ವರೆಗೂ ಬೃಹತ್ ರಸ್ತೆ ರೊಖೋ ಚಳುವಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂಜೀವಕುಮಾರ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment

Post a Comment